ಸ್ತೋತ್ರ 18 Swaamiyesoo Ninna Naamavannu ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಸ್ವಾಮಿಯೇಸೂ ನಿನ್ನ ನಾಮವನ್ನು ಸ್ತೋತ್ರಿಪೆನೈ
ಪ್ರೇಮವುಳ್ಳ ದಿವ್ಯಚರಣವನ್ನು ಸ್ಮರಿಸುವೆನೈ
1. ಭಕ್ತರೊಡನೆ ಕೂಡಿಕೊಂಡು ನಿತ್ಯ ಹಾಡುವೆನು
ಯುಕ್ತವಾಗಿ ದೈವ ಕೀರ್ತಿಯನ್ನು ಹೊಗಳುವೆನು
2. ಕಷ್ಟಪಟ್ಟು ಭಾರವನ್ನು ಹೊರುವ ಮನುಜರಿಗೆ
ತುಷ್ಟಶಮವ ಕೊಡುವೆ ಬನ್ನಿರೆಂದೆ ಯೆಲ್ಲರಿಗೆ
3. ತಾಪತ್ರಯವು ಕಾಡಿಸುವುದೆನ್ನ ಮನದೊಳಗೆ
ಶಾಪವಿಮೋಚನೆಯನೀವದೆನಗೆ ಧರೆಯೊಳು
4. ಇಷ್ಟದಿಂದಲರಸುತ್ತಾ ನಾ ಬಂದು ನಿಂತೆನು
ದುಷ್ಟತನವನಳಿಸಿಹಾಕು ಅರಿತುಕೊಳ್ಳುವೆನು
5. ಲೋಕಾರಣ್ಯದಲ್ಲಿ ದುಃಖವ ಹೋಗಲಾಡಿಸು
ಎಕದೇವಾಗ್ರಹಕ್ಕೆ ಎನ್ನ ತಪ್ಪಿಸು
6. ವಿಷ್ಟಪ ಪದವಿಯಲ್ಲಿ ಸೇರಿಸಯ್ಯಾ ತಳ್ಳದೆ
ನಿಷ್ಠೆಯಿಂದ ಸೇವಿಸುವೆನು ನಿರುತವೂ ಬಿಡದೆ
7. ನಾ ಮಾಡಿರುವ ಪ್ರಾರ್ಥನೆಯನೀಗ ಆಲಿಸು
ಅಮೋದದಿ ದಾಸನನ್ನು ಬೇಗನೇ ಪಾಲಿಸು
Swaamiyesoo Ninna Naamavannu Stotripenai
Premavulla Divyacharanavannu Smarisuvenai
1. Bhaktarodane Koodikondu Nitya Haaduvenu
Yuktavaagi Daiva Keertiyannu Hogaluvenu
2. Kashtapattu Bhaaravannu Horuva Manujarige
Tushtashamava Koduve Bannirende yellarige
3. Taapatrayavu Kaadisuvudenna Manadolage
Shaapa vimochaneya neevadenage Dhareyolu
4. Ishtadindalarasuttaa Naa Bandu Nintenu
Dushtatanavanalisihaaku Aritukolluvenu
5. Lokaaranyadalli Dukhava Hogalaadisu
Ekadevaagrahakke Enna Tappisu
6. Vishtapa Padaviyalli Serisayyaa Tallade
Nishteyinda Sevisuvenu Nirutavoo Bidade
7. Naa Maadiruva Praarthaneyaneega Aalisu
Amodadi Daasanannu Begane Paalisu