ಸ್ತೋತ್ರ 76 Maatukotta Reetiyalli Yesu – Eddanu Nija ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಮಾತುಕೊಟ್ಟ ರೀತಿಯಲ್ಲಿ ಯೇಸು – ಎದ್ದನು ನಿಜ
ಖ್ಯಾತಿ ಪಡೆದನು
1. ದೂತನೋರ್ವ ಗಗನದಿಂದ ಇಳಿದುಬಂದನು – ಕರ್ತ
ನಾತನೆಂದು ಯೇಸುವಿಗೆ ಸಾಕ್ಷಿನುಡಿದನು
ಮಾತ ಸ್ತಾಪಿಸಿದನು
2. ನಿತ್ಯಜೀವಿಯನ್ನು ಹುಡುಕಲೇಕೆ ಮರ್ತ್ಯರೊಳ್ – ಆತ
ಹತ್ಯಮಾಡಿ ಮೃತ್ಯುವನ್ನು ಜೈಸಿಬಿಟ್ಟನು
ಸತ್ಯ ಸ್ತಾಪಿಸಿದನು
3. ಹೆದರಿ ನಡುಗುತಿದ್ದವರಿಗೆ ಅಭಯಕೊಟ್ಟನು – ನೀವು
ಹೆದರಬೇಡಿ ಕರ್ತನು ಉತ್ಥಾನವಾದನು
ಇದನು ಸ್ಥಾಪಿಸಿದನು
4. ಕ್ಷಿತಿಗೆ ಪುನರುತ್ಥಾನದಿಂದ ಶಾಂತಿಯಾಯಿತು – ಆತ
ಮ್ರುತಿಯು ತರುವ ಭೀತಿಯನ್ನು ಹರಿಸಿಬಿಟ್ಟನು
ಹಿತವ ಸ್ಥಾಪಿಸಿದನು
5. ನಿತ್ಯ ಹರ್ಷಿಸುತ್ತಿರೋಣ ಎದ್ದ ಕರ್ತನೊಳ್ – ಆತ
ಸತ್ಯವಾಗಿ ನಮ್ಮೊಳಿದ್ದು ಕಾಯುತಿರುವನು
ನಿತ್ಯ ಜೀವ ಕೊಡುವನು
Maatukotta Reetiyalli Yesu – Eddanu Nija
Khyaati Padedanu
1. Dootanorva Gaganadinda Ilidubandanu – Karta
Naatanendu Yesuvige Saakshinudidanu
Maata Staapisidanu
2. Nityajeeviyannu Hudukaleke Martyarol – Aata
Hatyamaadi Mrutyuvannu Jaisibittanu
Satya Staapisidanu
3. Hedari Nadugutiddavarige Abhayakottanu – Neevu
Hedarabedi Kartanu Uttaanavaadanu
Idanu Staapisidanu
4. Kshitige Punaruttaanadinda Shaantiyaayitu – Aata
Mrutiyu Taruva Bheetiyannu Harisibittanu
Hitava Staapisidanu
5. Nitya Harshisuttirona Edda Kartanol – Aata
Satyavaagi Nammoliddu Kaayutiruvanu
Nitya Jeeva Koduvanu