ಸ್ತೋತ್ರ 28 Tunga Parameshanige ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ತುಂಗ ಪರಮೇಶನಿಗೆ ಸಂಗೀತವ ಪಾಡಿರಿ
ಕಂಗೊಳಿಪ ಪ್ರೇಮವನ್ನು ಮಂಗಳದಿಂ ಹಾಡಿರಿ
1. ವರದನಾಜ್ಞೆ ಮೀರಿದಂಥ ದುರುಳರಾದ ಮಾನವರ
ನರಕದಿಂದ ತಪ್ಪಿಸಲು ಕರುಣೆಯನ್ನು ಸಾರಿದ
2. ಶಿಕ್ಷೆಗೊಳಗಾದವರು ರಕ್ಷಣೆಯ ಹೊಂದಲು
ರಕ್ಷಣೆಯ ಕರ್ತನಂ ಪ್ರತ್ಯಕ್ಷವಾಗಿ ತೋರಿದ
3. ಸುರಲೋಕವನ್ನು ಬಿಟ್ಟು ದುರಿತಶೋಕ ತುಂಬಿದೀ
ಧರೆಗೈದಿ ತನ್ನ ಕ್ರುಪಾವರಗಳನ್ನು ನೀಡಿದ
4. ಕಾಕು ಜನರ ಮೇಲೆ ಮಹಾಭೀಕರದಿಂ ಬಂದಿರ್ದ
ಏಕದೈವಕೋಪವನ್ನು ಸ್ವೀಕರಿಸಿಕೊಂಡಂಥ
5. ಮಿಥ್ಯೆಯಿಂದ ತುಂಬಿದವರಂ ಸತ್ಯವಂತರಾಗಿಸೆ
ಮ್ರುತ್ಯುಹೊಂದಿ ಬಂಧವನ್ನು ಹತ್ಯಮಾಡಿ ಜೈಸಿದ
6. ತಂದೆ ಬಳಿಯಲ್ಲಿ ಈಗ ನಿಂದು ಸಮಗೋಸುಗ
ಕುಂದದಿರ್ಪ ದಿವ್ಯಪ್ರೀತಿಯಿಂದ ಬೇಡಿಕೊಳ್ಳುವ
7. ಪಾವನಾತ್ಮನಾಗಿಹ ಯೆಹೋವನ್ನು ಬೇಡಿರಿ
ಭಾವಶುದ್ದರಾಗಿಯೇ ವಾಗ್ದೇವನಂ ಕೊಂಡಾಡಿರಿ
Tunga Parameshanige Sangeetava Paadiri
Kangolipa Premavannu Mangaladim Haadiri
1. Varadanaagne Meeridantha Durularaada Maanavara
Narakadinda Tappisalu Karuneyannu Saarida
2. Shikshegolagaadavaru Rakshaneya Hondalu
Rakshaneya Kartanam Pratyakshavaagi Torida
3. Suralokavannu Bittu Duritashoka Tumbidee
Dharegaidi Tanna Krupaavaragalannu Needida
4. Kaaku Janara Mele Mahaa bheekaradim Bandirda
Ekadaivakopavannu Sweekarisikondantha
5. Mithyeyinda Tumbidavaram Satyavantaraagise
Mrutyuhondi Bandhavanu Hatyamaadi Jaisida
6. Tande Baliyalli Eega Nindu Samagosuga
Kundadirpa Divyapreetiyinda Bedikolluva
7. Paavanaatmanaagiha Yehovannu Bediri
Bhaavashuddaraagiye Vaagdevanam Kondaadiri