ಸ್ತೋತ್ರ 217 Premadayasheeladevaa ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಪ್ರೇಮದಯಶೀಲದೇವಾ
1. ಪ್ರೇಮದಯಾಳುವ ನಾಮವ ಪಾಡುವ
ಕ್ಷೇಮದಿಂದ ಕಾದ ಪಾಮರಮಿತ್ರನೇ
2. ವರುಷವು ಹೋಗಲು ಹರುಷದಿಂ ನೂತನ
ವರುಷವನ್ನು ನಾವು ದರುಶಿಸ ಮಾಡಿದ
3. ಪೂರಣ ದಯದಿಂ ಮೀರಿದ ಆಜ್ಞೆಯ
ಭಾರವೆಲ್ಲವನ್ನು ಸೈರಿಸಿ ಕೊಂಡವ
4. ಕಷ್ಟವು ಮೂಡಲು ತುಷ್ಟಿಯ ಕೊಟ್ಟವ
ದುಷ್ಟನಿಂ ತಪ್ಪಿಸಿ ಇಷ್ಟರ ಕಾದವ
5. ಆತನ ಯೋಗ್ಯರಂ ಭೀತಿಗೆ ತಪ್ಪಿಸಿ
ನೀತಿ ತಪ್ಪಿದೆಮಗೆ ಪ್ರೀತಿಯ ಸಾರಿದ
6. ಹೊಂದಿದ ಕಾಲವಂ ಕುಂದಕ ಮಾಡದೆ
ತಂದೆಯ ಚಿತ್ತವಂ ಚಂದದಿಂ ನಡಿಸುವ
7. ಭಕ್ತಿಯ ಮಾರ್ಗದಿ ಶಕ್ತಿಯ ಹುಟ್ಟಿಸು
ಭಕ್ತರೊಡನೆ ಕರ್ತಾ ಮುಕ್ತಿಯ ಪಾಲಿಸು
Premadayasheeladevaa
1. Premadayaaluva Naamava Paaduva
Kshemadinda Kaada Paamaramitrane
2. Varushavu Hogalu Harushadim Nootana
Varushavannu Naavu Darushisa Maadida
3. Poorana Dayadim Meerida Aagneya
Bhaaravellavannu Sairisi Kondava
4. Kashtavu Moodalu Tushtiya Kottava
Dushtanim Tappisi Ishtara Kaadava
5. Aatana Yogyaram Bheetige Tappisi
Neeti Tappidemage Preetiya Saarida
6. Hondida Kaalavam Kundaka Maadade
Tandeya Chittavam Chandadim Nadisuva
7. Bhaktiya Maargadi Shaktiya Huttisu
Bhaktarodane Kartaa Muktiya Paalisu