ಸ್ತೋತ್ರ 214 Aacharisu Vishraantidinavannu ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಆಚರಿಸು ವಿಶ್ರಾಂತಿದಿನವನ್ನು – ಬಹು ಭಕ್ತಿಭಾವದಿಂ
ದಾಚಾರಿಸು ವಿಶ್ರಾಂತಿದಿನವನ್ನು
1. ಕಾರುಣ್ಯ ಮೂರ್ತಿಯು ಧಾರಿಣಿಯನೆಲ್ಲಾ
ಆರೇ ದಿನಗಲ್ಲಿ ಪೂರಯಿಸಿ
ಮಾರಣೆ ದಿನದಲ್ಲಿ ತೀರಿಕೆಯಾಗಿಯೇ
ಸಾರಿಪೇಳಿದ ಮಾತ ಮೀರದೆ ನಿತ್ಯವೂ
2.. ಗುರುರಾಯನೀ ಹೊತ್ತು ಮರಣದ ಕೊಂಡಿಯಂ
ಮುರಿದುಬಿಟ್ಟನು ಬಹು ಕರುಣೆಯಿಂದ
ಪರಿಶುದ್ಧ ಆತ್ಮನು ಭಕ್ತರ ಮೇಲೈದಿ
ವರಗಳ ಪಾಲಿಸಿ ಹರಸಿದ ಸುದಿನವ
3.. ಈ ದಿನದಲ್ಲಿ ಕೂಡ ರೋದನೆಯನ್ನೀವ
ಮೇದಿನಿಯ ಕಾರ್ಯವ ಸಾಧಿಸದೆ
ಆದಿದೇವನು ಇತ್ತ ವೇದವಾಕ್ಯವನ್ನು
ಓದುತ್ತ ಮನದಲ್ಲಿ ಬೋಧೆಯಂ ಪಡೆಯಲು
4.. ವರದ ಸುದೇವನು ಕರುಣದಿ ನೇಮಿಸಿದ
ಪರಿಶುದ್ಧ ದಿನವನ್ನು ಪುರಸ್ಕರಿಸಿ
ಪರಮಾರ್ಥ ವಿಷಯವ ತೊರೆಯದೆ ಧ್ಯಾನಿಸುತ್ತ
ಸ್ಥಿರವಾಗಿ ಪ್ರಭುವಿನ ಸ್ಮರಣೆಯೊಳ್ನೆಲೆಗೊಂ
5.. ಇಂದು ಭಕ್ತರ ಕೂಡ ಸುಂದರ ಸ್ವಾಮಿಯಂ
ಚಂದವಾದ ಮನದಿಂ ವಂದಿಸುತ
ಎಂದೆಂದಿಗಾತನ ಕುಂದದೆ ಮೆರೆಯುವಾ
ನಂದವನ್ನು ತಪ್ಪದೆ ಹೊಂದಲು ಪ್ರೇಮದಿಂ.
–END–
Aacharisu Vishraantidinavannu – Bahu Bhaktibhaavadim
Daacharisu Vishraantidinavannu
1. Kaarunya moortiyu Dhaariniyanellaa
Aare Dinagalli Poorayisi
Maarane Dinadalli Teerikeyaagiye
Saaripelida Maata Meerade Nityavu
2.. Gururaayanee Hottu Maranada Kondiyam
Muridubittanu Bahu Karuneyinda
Parishudda Aatmanu Bhaktara Melaidi
Varagala Paalisi Harasida Sudinava.
3.. Ee Dinadalli Kooda Rodaneyanneeva
Mediniya Kaaryava Saadhisade
Aadidevanu Itta Vedavaakyavannu
Odutta Manadalli Bodheyam Padeyalu
4.. Varada Sudevanu Karunadi Nemisida
Parishudda Dinavannu Puraskarisi
Paramaartha Vishayava Toreyade Dhyaanisutta
Stiravaagi Prabhuvina Smaraneyolnelegon
5.. Indu Bhaktara Kooda Sundara Swaamiyam
Chandavaada Manadim Vandisuta
Endendigaatana Kundade Mereyuvaa
Nandavannu Tappade Hondalu Premadim
…End…