ಸ್ತೋತ್ರ 19 Sundara Rakshakane – Ninna Vandita Naamavane ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಸುಂದರ ರಕ್ಷಕನೇ – ನಿನ್ನ ವಂದಿತ ನಾಮವನೇ
ಕುಂದದೆ ಕೀರ್ತಿಸಿ ಎಂದಿಗೂ ಹಾಡುತ
ಬಂದು ಭಜಿಪೆವೈಯ್ಯಾ
1. ನರರೊಳೆಲೈಪತಿಯೇ ನೀ ಪರಿಮಳ ವಾಸನೆಯೇ
ಧರಣಿಯ ಭಕ್ತರ ಸ್ಮರಣೆಗೆ ಯೋಗ್ಯನು
ನಿರುತವು ಸದ್ಗುರುವೇ
2. ಸಾಯದ ನರವರನೇ ನೀ ಗಾಯವ ಮಾಣಿಪನೇ
ಮಾಯದ ಜಗದಲಿ ನೀನೆಮಗಾಶ್ರಾಯ
ಕಾಯೋ ವಿಮೋಚಕನೇ
3. ಪರಮದಯಾಕರನೇ ನೀ ಧರಣಿಯ ಭಾಸ್ಕರನೇ
ನರರಿಗೆ ಮಾರ್ಗವು ವರಗಳ ಮೂಲವು
ಕರುಣೆಯ ಸಾಗರನೇ
4. ಅಧಿಪತಿಯಾದವನೇ ನೀ ಮಧುರ ಕೃಪಾಮೃತನೇ
ಬುಧರು ಸುಸೇವೆಯ ವಿವಿಧದಿ ಮಾಡಲು
ಅಧಿಕ ಹರುಷಗೊಳಿಸೈ
5. ಅರಸನು ನೀನೆಮಗೆ ಅತಿಭರದಲಿ ನಿನ್ನೆಡೆಗೆ
ಸ್ಮರಣೆಯ ಮಾಡುತ ಬರುವೆವು ಕರ್ತನೇ
ಹರಸೆಮ್ಮ ನಾದರಿಸೈ
Sundara Rakshakane – Ninna Vandita Naamavane
Kundade Keertisi Endigoo Haaduta
Bandu Bhajipevaiyyaa
1. Nararolelaipatiye Nee Parimala Vaasaneye
Dharaniya Bhaktara Smaranege Yogyanu
Nirutavu Sadguruve
2. Saayada Naravarane Nee Gaayava Maanipane
Maayada Jagadali Neenemagaashraya
Kaayo Vimochakane
3. Paramadayaakarane Nee Dharanaiya Bhaaskarane
Nararige Maargavu Varagala Moolavu
Karuneya Saagarane
4. Adhipatiyaadavane Nee Madhurakrupaamrutane
Budharu Suseveya Vividhadi Maadalu
Adhika Harushagolisai
5. Arasanu Neenemage Atibharadali Ninnedege
Smaraneya Maaduta Baruvevu Kartane
Harasemma Naadarisai