ಸ್ತೋತ್ರ 180 Sabheye Raajyadantiruvadu – Kristanaaluva ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಸಭೆಯೇ ರಾಜ್ಯದಂತಿರುವದು – ಕ್ರಿಸ್ತನಾಳುವ
ಸಭೆಯೇ ರಾಜ್ಯದಂತಿರುವದು
1. ವೀಭವದಿಂದಲೇ ಯೇಸು – ಸಭೆಯನಾಳುವನೆಂದೂ
ವಿಭುವಾಜ್ಞೆಯಂತೆ ಭಕ್ತ – ರಭಯಮಾರ್ಗದಿ ನಡೆವ
2. ಇಲ್ಲಿ ಸುಜನಾಳಿ ಯೇಸು – ಮರಳಿ ಬರುವನೆಂದು
ಉಲ್ಲಾಸಹೃದಯದಿಂ – ಸಲ್ಲಿಪುದು ಸೇವೆಯ
3. ಇಹದು ಭಕ್ತರ ಸಭೆಯು – ಇಹದೊಳು ಪರದೊಳು
ಮಹಿಮನೆಲ್ಲೆಲ್ಲಿಯು – ಮಹಿತ ಪ್ರೇಮವ ತೋರ್ಪ
4. ಬಲವಾಗಿ ನಿಂತಿಹದು – ಬಲಿಪೀಠವಿಲ್ಲೊಂದು
ಒಲಿದು ತೋರಿಪುದದು – ಬಲಿಯಾದ ದೇವಸುತನ
5. ಬಡವರು ಬಲ್ಲಿದರು – ಕೂಡಿ ಕರ್ತನ ಭಜಿಸಿ
ಪಡೆವರು ಭಾಗ್ಯವಂ – ಭಕ್ತಿಯಿಂ ಕೈಯ ನೀಡಿ
6. ಇಲ್ಲಿಂದ ಜೀವನದಿಗ – ಳೆಲ್ಲೆಲ್ಲೂ ಹರಿಯುತ್ತ
ಸಲ್ಲಲಿತಗುಣಗಳ – ಫಲವೃಷ್ಟಿ ಈಯುತ್ತಿಹವು
7. ಅರಸೇ ಕ್ರಿಸ್ತೇಸು ಪ್ರಭುವೇ – ಈ ರಕ್ಷಣಾನಂದವ
ಧರೆಯ ಮಾನವರೆಲ್ಲ – ಅರಿತು ಹರ್ಷಿಸೆ ಮಾಡು
Sabheye Raajyadantiruvadu – Kristanaaluva
Sabheye Raajyadantiruvadu
1. Viibhavadindale Yesu – Sabheyanaaluvanendoo
Vibhuvaagneyante Bhakta – Rabhayamaargadi Nadeva
2. Illi Sujanaali Yesu – Marali Baruvanendu
Ullasahrudayadim -Sallipudu Seveya
3. Ihadu Bhaktara Sabheyu – Ihadolu Paradolu
Mahimanellelliyu – Mahita Premava Torpa
4. Balavaagi Nintihadu – Balipeetavillondu
Olidu Toripudadu – Baliyaada Devasutana
5. Badavaru Ballidaru – Koodi Kartana Bhajisi
Padevaru Bhaagyavam – Bhaktiyim Kaiya Needi
6. Illinda Jeevanadiga – Lellelloo Hariyutta
Sallalitagunagala – Phalavrushti Eeyuttihavu
7. Arase Kristesu Prabhuve – Ee Rakshanaanandava
Dhareya Maanavarella – Aritu Harshise Maadu