ಸ್ತೋತ್ರ 16 Yesu Naama Eshto Madhura ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಯೇಸು ನಾಮ ಎಷ್ಟೋ ಮಧುರ – ಕ್ರಿ
ಸ್ತೇಸು ನಾಮ ಎಷ್ಟೋ ಮಧುರ
ಮೋಸಗಳ ಧೋಶಗಳ ನಾಶಗೈಯುವ ಕ್ರಿ – ಸ್ತೇಸು
1. ಸ್ವಾಂತದಲ್ಲಿ – ಭ್ರಾಂತಿಯಲ್ಲಿ
ಶಾಂತಿಯನ್ನು ನೀಡಿ ಬಹು ಚಿಂತೆಯನ್ನು ಪೋಗಮಾಡು
2. ಪ್ರೇಮ ಸುರಿಸಿ – ಕ್ಷೇಮ ತರಿಸಿ
ಕಾಮಗುಣ ಪಾಮರತೆ ನಾಮವನು ನೀಗಿಸುವ
3. ಮೋಕ್ಷದೆಸೆಗೆ – ಸಾಕ್ಷಿ ಎಸಗೆ
ಈಕ್ಷಿಸಿದ ರಕ್ಷಣೆಗೆ ದಕ್ಷತೆಯ ವಹಿಸುವ
4. ಶೀಲಮತಿಯ – ಪಾಲಿಸುತಲಾ
ಕಾಲನನು ಲೀಲೆಯಲಿ ಕೂಲಿಸುವ ಜ್ವಾಲೆ ಕ್ರಿ –
5. ದಾರಿದ್ರ್ಯದೊಳು – ತಾಳ್ಮೆಯಿರಲು
ಸಾರಕರುಣಾರಸವ ಮೀರಿ ಸುರಿಯುವ ಕ್ರಿ –
Yesu Naama Eshto Madhura – Kri
Stesu Naama Eshto Madhura
Mosagala Dhoshagala Naashagaiyuva Kri-stesu
1. Swaantadalli – Bhraantiyalli
Shaantiyannu Needi Bahu Chinteyannu Pogamaadu
2. Prema Surisi- Kshema Tarisi
Kaamaguna Paamarate Naamavanu Neegisuva
3. Mokshadesege – Saakshi Esage
Eekshisida Rakshanege Dakshateya Vahisuva
4. Sheelamatiya – Paalisutalaa
Kaalananu Leeleyali Koolisuva Jwaale Kri-
5. Daaridryadolu – Taalmeyiralu
Saarakarunaarasava Meeri Suriyuva kri