ಸ್ತೋತ್ರ 139 Nutisi Haaduvenu – Srushteeshana ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ನುತಿಸಿ ಹಾಡುವೆನು – ಸೃಷ್ಟೀಶನ
ನುತಿಸಿ ಹಾಡುವೆನು – ಎಂದೆಂದಿಗೂ
ನುತಿಸಿ ಹಾಡುವೆನು
1. ಕ್ಷಿತಿಯೊಳು ಜೀವಿಸುವಾಗಲೂ – ನಾ
ಮ್ರುತನಾಗೆ ಸ್ವರವು ನಿಂತಾಗಲೂ
ಸ್ತುತಿಸ್ತೋತ್ರವನು ಬಿಡೆನೆಂದಿಗೂ ಎನ್ನ
ಮತಿಯೂ ಚೈತನ್ಯವೂ ಇರುವತನಕ ನಿತ್ಯದೊಳ್
2. ಘನ ಚರಾಚರ ಸೃಷ್ಟಿಕರ್ತನು – ಆ
ತನ ಸತ್ಯವಿದು ನಿಲ್ವದೆಂದಿಗೂ
ಜನಪ್ರೇಮಪಾತ್ರನಾದೀಶನಲ್ಲಿ ತಾ
ಮನವಿಟ್ಟು ಬಾಳುವವ ಭಾಗ್ಯವಂತನು
3. ಬಾಧೆಪಡುವವರ ರಕ್ಷಿಸಿ ಅತಿ
ರೋದಿಪ ಜೀವಿತರ ಪೋಷಿಸಿ
ಮೋದದಿ ಬಡವರನಿರೀಕ್ಷಿಸಿ ತನ್ನ
ಆದರವಾಗ್ದಾನವೀಯುವ ದೇವರ
4. ದಿಟ್ಟಿಗೆಟ್ಟವರ್ಗೆಲ್ಲಾ ದೃಷ್ಟಿಯಂ ಗಾಸಿ
ಪಟ್ಟವರಿಗೆ ಹೊಸ ಶಕ್ತಿಯಂ
ನಿಟ್ಟುಸಿರ್ಬಿಡುವರ್ಗೆ ಶಾಂತಿಯಂ ದೆಸೆ
ಗೆಟ್ಟವರಿಗೆ ಕಾಪಂ ಬಂದಿಗೆ ಬಿಡುವೀವ
5. ಕ್ಷಿತಿಯೊಳು ಜೀವಿಸುವಾಗಲೂ – ನಾ
ಮೃತನಾಗೆ ಸ್ವರವು ನಿಂತಾಗಲೂ
ಸ್ತುತಿಸ್ತೋತ್ರವನು ಬಿಡೆನೆಂದಿಗೂ ಎನ್ನ
ಮತಿಯೂ ಚೈತನ್ಯವೂ ಇರುವತನಕ ನಿತ್ಯದೊಳ್
Nutisi Haaduvenu – Srushteeshana
Nutisi Haaduvenu – Endendigoo
Nutisi Haaduvenu
1. Kshitiyolu Jeevisuvaagaloo – Naa
Mrutanaage Swaravu Nintaagaloo
Stutistotravanu Bidenendigoo Enna
Matiyoo Chaitanyavoo Iruvatanaka Nityadol
2. Ghana Charaachara srushtikartanu – Aa
Tana Satyavidu Nilvadendigoo
Janapremapaatranaadeeshanalli Taa
Manavittu Baaluvava Bhaagyavantanu
3. Baadhepaduvavara Rakshisi Ati
Rodipa Jeevitara Poshisi
Modadi Badavaranireekshisi Tanna
Adaravaagdaanaveeyuva Devara
4. Dittigettavargellaa Drushtiyam Gaasi
Pattavarige Hosa Shaktiyam
Nittusrbiduvarge Shaantiyam Dese
Gettavarige Kaapam Bandige Biduveeva
5. Kshitiyolu Jeevisuvaagaloo – Naa
Mrutanaage Swaravu Nintaagaloo
Stutistotravanu Bidenendigoo Enna
Matiyoo Chaitanyavoo Iruvatanaka Nityadol