ಸ್ತೋತ್ರ 120 Deshikanaadesuswaami Enna ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ದೇಶಿಕನಾದೇಸುಸ್ವಾಮಿ ಎನ್ನ
ಗಾಗಿ ತಪ್ಪಿಸಿ ಮುಂದೆ ನಡಿಸು ನೀ ಪ್ರೇಮೀ
1. ಆಶಾಪಾಶದೊಳು ಈಸು ದಿನ ಬದುಕಿ
ಮೋಸಮಾರ್ಗದಲ್ಲಿ ನಡೆದಿಹೆನೆ
ನಾಶವಾಗದ ಉಪದೇಶವೆನಗೆ ತಂದು
ಪೋಷಿಸಿ ಮನಸ್ಸಿನ ದೋಷವ ಬಿಡಿಸು
2. ಜನ್ಮ ಪಾಪದಿ ಹುಟ್ಟಿ ಜಾಗರವಿಲ್ಲದೆ
ಕರ್ಮದ್ರೋಹದಪರಾಧಿಯಾದೆ
ಧರ್ಮಸೂತ್ರವ ಬಿಟ್ಟು ಮಾಯಾಬಂಧದಿ ಬಿಟ್ಟು
ದುರ್ಮನನಾದೆನ್ನ ಶ್ರಮೆಯನು ಹರಿಸು
3. ಅಂಧಕನಾಗಿ ನಾ ತಂದ ಜ್ಞಾನವ ಬಿಟ್ಟು
ಮಂದಮತಿಯಿಂದ ಮರುಳಾದೆನು
ಹಿಂದುಮುಂದುಗಾಣದೆ ದುಂದುಗಾರನಾದೆ
ಇಂದೇ ರಕ್ಷಿಸಿ ಎನ್ನನ್ನೆಂದೂ ನೀ ನಡಿಸು
4. ತಾಮಸ ಗುಣದಿಂದ ತಂತ್ರಬೋಧನೆ ನೆಚ್ಚಿ
ಪಾಮರನಾಗಿಯೆ ಬದುಕಿದೆನು
ರಮಣೀಯ ವಾಕ್ಯ ನೇಮದಿಂದಾಲೈಸಿ
ಧಾಮ ಮಾರ್ಗದೊಳು ನೀಂ ಪ್ರೇಮದಿ ನಡಿಸು
5. ರಿಕ್ತವ ತೊಲಗಿಸಿ ಚಿತ್ತವ ಪಸರಿಸಿ
ಶಕ್ತಿಯ ಕರುಣಿಸಿ ಸಲಹು ಎನ್ನ
ಭಕ್ತಿಯ ಮಾರ್ಗದೊಳ್ ನಿತ್ಯವೂ ಕಾದೆನ್ನ
ಮುಕ್ತಿಯೊಳ್ ಸೇರಿಸು ಕರ್ತನಾದೇಸುವೇ
Deshikanaadesuswaami Enna
Gaagi Tappisi Munde Nadisu Nee Premee
1. Aashaapaashadolu Eesu Dina Baduki
Mosamaargadalli Nadedihene
Naashavaagada Upadeshavenage Tandu
Poshisi Manassina Doshava Bidisu
2. Janma Paapadi Hutti Jaagaravillade
Karmadrohadaparaadhiyaade
Dharmasootrava Bittu Mayaabandhadi Bittu
Durmananaadenna Shrameyanu Harisu
3. Andhakanaagi Naa Tanda Gnaanava Bittu
Mandamatiyinda Marulaadenu
Hindumundugaanade Dundugaaranaade
Inde Rakshisi Ennannendoo Nee Nadisu
4. Taamasa Gunadinda Tantrabodhane Nechhi
Paamaranaagiye Badukidenu
Ramaneeya Vaakya Nemadindaalaisi
Dhaama Maargadolu Neem Premadi Nadisu
5. Riktava Tolagisi Chittava Pasarisi
Shaktiya Karunisi Salahu Enna
Bhaktiya Maargadol Nityavoo Kaadenna
Muktiyol Serisu Kartanaadesuve