ಸ್ತೋತ್ರ 12 Karunaambara Devaa Ninna ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಕರುಣಾಂಬರ ದೇವಾ ನಿನ್ನ
ಚರಣ ಗತಿಯೇ ಜೀವ
ಸುರನರರೆಲ್ಲರು ಮರೆಹೋಗುವರು ನಿನ್ನ
ಸ್ಥಿರವರಗಳ ಕೊಡು ಪರಮ ಯೇಹೋವನೇ
1. ನಿರುತ ಸಂಪೂರಣನೇ ನಿಖಿಲ
ದುರಿತ ನಿವಾರಣನೇ – ಎನ್ನ
ಕೊರತೆಗಳೆಲ್ಲವ ಹರಿಸಿ ಕಟಾಕ್ಷಿಸಿ
ಪೊರೆದು ಸರಸ ನಿಜಸುಖವ ಕೊಡು ಎನಗೆ
2. ಆದಿವಾಕ್ಯ ವರನೇ ಎಲ್ಲಾ
ರೋಧನೆ ಹರಿಸಿಪನೇ – ಸತ್ಯ
ವೇದಮಧುರವನ್ನು ಮೋದದಿ ಸವಿವಂತೆ
ಕಾದು ಸದ್ಭಕ್ತಿಯ ನೀ ದಯೆಮಾಡೈ
3. ಮರಣೋತ್ತಾರಕನೇ ಮೋಕ್ಷಾ
ವರಣೋದ್ದಾರಕನೇ – ಮಾಯಾ
ಧರೆಯೊಳು ನಿನ್ನಯ ಕರದಿ ನಡಿಸಿ ನಿನ್ನ
ಚರಣಪದವಿಯಲ್ಲಿ ಕರೆದೆನ್ನ ಸೇರಿಸು
Karunaambara Devaa Ninna
Charana Gatiye Jeeva
Suranararellar Marehoguvaru Ninna
Sthiravaragala Kodu Parama Yehovane
1. Niruta Sampooranane Nikhila
Durita Nivaaranane- Enna
Korategalellava Harisi Kataakshisi
Poredu Sarasa Nijasukhava Kodu Enage
2. Aaadivaakya Varane Ellaa
Rodhane Harisipane-Satya
Vedamadhuravannu Modadi Savivante
Kaadu Sadbhaktiya Nee Dayemaadai
3. Maranottaarakane Mokshaa
Varanoddaarakane – Maayaa
Dhareyolu Ninnaya Karadi Ndisi Ninna
Charanapadaviyalli Karedenna Serisu