ಸ್ತೋತ್ರ 81 Eridanu Swaami – Mahimeyim ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಏರಿದನು ಸ್ವಾಮಿ – ಮಹಿಮೆಯಿಂ
ಧಾರಿಣಿಯನ್ನುಳಿದು
ಧೀರನಂದದಿ ಗೋರಿಯ ಬಿಟ್ಟೆದ್ದು
ಸೇರಿದ ಪರವನು ಯೇಸು ಪ್ರಭುವು ತಾ
1. ಮರಣಾಧೀನರು ಸೇರಲಾರದ ತಾಣದೊಳು
ಪರತರ ಸಿಂಹಾಸನವನೇರಿ ತಂದೆಯ ಶಕ್ತಿಯನೆ ತಾ ಪೊಂದಿ
2. ಅಂತರಿಕ್ಷದಲ್ಲಿ ತಿರುಗಿ ತೋರುವ ಕಾಲದೊಳು
ಸಂತಸದಿಂದಲಿ ತನ್ನವರೆಂದು ಸ್ವೀಕರಿಸುವನು ಏಮ್ಮನು ಅಂದು
3. ಎನ್ನ ಹೃದಯದೊಳು ಪಾಪವನ್ನು ನೀಗಿಸಲು
ಖಿನ್ನಸ್ವಾಂತಗಳನ್ನು ತೊಲಗಿಸಿ ಉನ್ನತಮನವನು ಸನ್ನುತನೀಯಲು
4. ಭಜನೆಯ ಮಾಡುವವು ನಿರುತವು ಭೂಪರರಾಜ್ಯಗಳು
ವಿಜಿತನರಕವು ಕಂಪಿಸಿ ಮಣಿವದು ತ್ರಿಜಗದೊಡೆಯನೇ ನಿನಗೆ
5. ಜಯ ಜಯವೆನ್ನುತಲಿ ಜಯಗೀತ ಜಗದೊಳು ಹಾಡಲಿ
ಜಯವೀರ ಕ್ರಿಸ್ತನ ನಯಭಯದೊಡನೆ ದಯದ ಆತ್ಮನ ವಿನಯದಿ
ಪೊಗಳುವ
Eridanu Swaami – Mahimeyim
Dhaariniyannulidu
Dheeranandadi Goriya Bitteddu
Serida Paravanu Yesub Prabhuvu Taa
1. Maranaadheenaru Seralaarada Taanadolu
Paratara Simhaasanavaneri Tandeya Shaktiyane Taa Pondi
2. Antarikshadalli Tirugi Toruva Kaaladolu
Santasadindali Tannavarendu Sweekarisuvanu Emmanu Andu
3. Enna Hrudayadolu Paapavannu Neegisalu
Khinnaswaantagalannu Tolagisi Unnatamanavanu Sannutaneeyalu
4. Bhajaneya Maaduvavu Nirutavu Bhoopararaajyagalu
Vijitanarakavu Kampisi Manivadu Trijagadodeyane Ninage
5. Jaya Jayavennutali Jayageeta Jagadolu Haadali
Jayaveera Kristana Nayabhayadodane Dayada Aatmana Vinayadi
Pogaluva