ಸ್ತೋತ್ರ 43 Paralokada Devarido Saruva Lokarakshegaagi ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಪರಲೋಕದ ದೇವರಿದೋ ಸರುವ ಲೋಕರಕ್ಷೆಗಾಗಿ
ನರನ ರೂಪ ತಾಳಿ ಬಂದ ಪರಮತಿಶಯ ನೋಡ ಬನ್ನಿ
1. ಸುರಲೋಕದ ದೂತರತಿ ಹರುಷದಿಂದ ಹಾರಿಬಂದು
ಕುರುಬರಿಗೆ ಸಾರಿದರು ವರ ಯೇಸುವಿನ ಸುದ್ದಿಯನ್ನು
2. ಆದಿನರರ ಪಾಪಕ್ಕಾಗಿ ವೇದಪಿತರು ಸಾರಿದಂತೆ
ಶೋಧಕಪಿಶಾಚನನು ಛೇಧಿಸ ಕ್ರಿಸ್ತೇಸು ಬಂದ
3. ಕಂದನಾಗಿ ಬಂದ ಯೇಸು ಸುಂದರನ ಚರಣಗಳಿಗೆ
ತಂದರಗೋ ಕಾಣಿಕೆಯನಿಂದು ಮಹಾಪಂಡಿತರು
4. ದೀನನಾಗಿ ಬಂದ ದೈವಮಾನವುಳ್ಳ ಕರ್ತನೆದೋ
ಹೀನವಾದ ಗೋದಲಿಯೊಳ್ ತಾನೆ ದಯದಿಂದ ಬಂದ
5. ನಿತ್ಯಜೀವ ಕೊಡುವ ನಮ್ಮ ನೀತಿಯುಳ್ಳ ಕರ್ತನೀತ
ಸತ್ಯ ಭಕ್ತಿಯಿಂದ ನಾವು ಯುಕ್ತರಾಗಿ ಸೇವಿಸುವ
6. ಪುಣ್ಯ ಗುರುವೇಸುವಿನ ಮನ್ನಣೆಯಂ ಬೇಡಿರೀಗ
ಅನ್ಯರೆಂದು ತಳ್ಳದೆಮ್ಮ ಧನ್ಯರಾಗ ಮಾಡುವನು
7. ಹಲ್ಲೆಲೂಯ ಹಾಡಿರೀಗ ಹಲ್ಲೆಲೂಯ ಪಾಡಿರೀಗ
ಹಲ್ಲೆಲೂಯ ಕರ್ತನನ್ನು ಎಲ್ಲೆಲ್ಲಿಯೂ ಸಾರಿರೀಗ
Paralokada Devarido Saruva Lokarakshegaagi
Narana Roopa Taali Banda Paramatishaya Noda Banni
1. Suralokada Dootarati Harushadinda Haaribandu
Kurubarige Saaridaru Vara Yesuvina Suddiyannu
2. Aadinarara Paapakkaagi Vedapitaru Saaridante
Shodhakapishaachananu Chhedhisa Kristesu Banda
3. Kandanaagi Banda Yesu Sundarana Charanagalige
Tandarago Kaanikeyanindu Mahaapanditaru
4. Deenanaagi Banda Daivamaanavulla Kartanedo
Heenavaada Godaliyol Taane Dayadinda Banda
5. Nityajeeva koduva Namma Neetiyulla Kartaneeta
Satya Bhaktiyinda Naavu Yuktaraagi Sevisuva
6. Punya Guruvesuvina Mannaneyam Bedireega
Anyarendu Tallademma Dhanyaraaga Maaduvanu
7. Hallelooya Haadireega Hallelooya Paadireega
Hallelooya Kartanannu Ellelliyoo Saarireega