ಸ್ತೋತ್ರ 125 Karunisu Neene Sadguru Yesuswaamee ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಕರುಣಿಸು ನೀನೇ ಸದ್ಗುರು ಯೇಸುಸ್ವಾಮೀ
ನರಕಮಾರ್ಗವ ತಪ್ಪಿಸು ಭಕ್ತಪ್ರೇಮೀ
1. ಬರಿದೆ ಕಷ್ಟವ ಪಟ್ಟು ಭಾರವ ಹೊತ್ತು
ತಿರುಗಿದೆ ವಿಶ್ರಾಂತಿ ದೊರಕದು ಮತ್ತು
2. ಆಶ್ರಯ ಹರಿಸುವ ತಂದೆ ನೀನಿರಲು
ಆಶ್ರಯ ಮಾಡುವೆ ರಾತ್ರಿಯು ಹಗಲು
3. ಏಕಪುತ್ರನಾದ ಯೇಸುವೇ ನೀನು
ಲೋಕದ ಜನವ ಕಾಯುವನಲ್ಲವೇನು
4. ಮುರಿದ ಮಾನಸದಿಂದ ನಾನಿಂದು ಬಂದೆ
ಪರಿಪೂರ್ಣದಯದಿಂದ ಪಾಲಿಸು ತಂದೆ
5. ಸತ್ಯವೇದದ ಕಾಂತಿ ತೋರಿಸು ಮನಕೆ
ನಿತ್ಯಜೀವದ ದಾರಿ ತಿಳಿಸುವೆ ಜನಕೆ
6. ನಿತ್ಯಜೀವದ ದಾರಿ ನಡೆಯಲು ಬಲವ
ಸತ್ಯಾತ್ಮಕ್ರುಪೆಯನು ಪಾಲಿಸು ವರವ
7. ನನ್ನ ಜೀವದ ಕಾಲವೆಲ್ಲವು ನಿನಗೆ
ಚೆನ್ನಾಗಿ ಸೇವೆಯ ಮಾಡುವ ಹಾಗೆ
Karunisu Neene Sadguru Yesuswaamee
Narakamaargava Tappisu Bhaktapremee
1. Baride Kashtava Pattu Bhaarava Hottu
Tirugide Vishraanti Dorakadu Mattu
2. Aashrya Harisuva Tande Neeniralu
Aashrya Maaduve Raatriyu Hagalu
3. Ekaputranaada Yesuve Neenu
Lokada Janava Kaayuvanallavenu
4. Murida Maanasadinda Naanindu Bande
Paripoornadayadinda Paalisu Tande
5. Satyavedada Kaanti Torisu Manake
Nityajeevada Daari Tilisuve Janake
6. Nityajeevada Daari Nadeyalu Balava
Satyaatmakrupeyanu Paalisu Varava
7. Nanna Jeevada Kaalavellavu Ninage
Chennaagi Seveya Maaduva Haage