ಸ್ತೋತ್ರ 95 Maanavarannu Bodhise Daivagnaanada ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಮಾನವರನ್ನು ಬೋಧಿಸೆ ದೈವಜ್ಞಾನದ ವೇದವಿದು – ಇದರ
ಧ್ಯಾನವ ಮಾಡುತ ನಡೆಯುವ ಜನರು ಮಾನವ ಹೊಂದುವರು
1. ಪಾದಕೆ ದೀಪ ಮಾರ್ಗಕೆ ಬೆಳಕು ವೇದದ ಬೋಧನೆಯು – ಇದ
ಮೋದದಿಂದೋದಿ ನಡೆಯುವ ಜನರ ಪಾದ ಕದಲದೆಂದೂ
2. ಎಲ್ಲರ ಹೃದಯವ ಶೋಧನೆಮಾಡಿ ಎಲ್ಲರ ಗುಣಗಳನು – ಅವ
ರೆಲ್ಲರ ಮುಂದೆ ತೋರಿಪ ಕೊರತೆಯದಿಲ್ಲದ ಕನ್ನಡಿಯು
3. ದೇವರು ಕೊಟ್ಟ ಆತ್ಮದ ಖಡ್ಗ ದೇವರ ಘನವೇದ – ಇದು
ಭಾವಗಳನ್ನು ಛೇದಿಸುವಂಥ ಯೆಹೋವನ ಆಯುಧವು
4. ಶೋಧನೆಯನ್ನು ಜೀವದ ವಾಕ್ಯದ ಬೋಧನೆಯಿಂ ಜೈಸಿ – ಮೃತಿ
ಬಾಧೆಯ ವೇಳೆಯಲ್ಲಿಯೂ ಅದರ ಬೋಧನೆ ಆಶ್ರಯವು
5. ದೇವರ ವಾಕ್ಯವ ಸ್ನೇಹಿಸಿ ನಾವು ಪಾವನಮಾರ್ಗದೊಳು – ನಮ್ಮ
ಜೀವದ ಕಾಲದೊಳೆಲ್ಲವು ನಡೆಯಲು ಭಾವವ ಮಾಡುವೆವು
Maanavarannu Bodhise Daivagnaanada Vedavidu – Idara
Dhyaanava Maaduta Nadeyuva Janaru Maanava Honduvaru
1. Paadake Deepa Maargake Belaku Vedada Bodhaneyu – Ida
Modadindodi Nadeyuva Janara Paada Kadaladendoo
2. Ellara Hrudayava Shodhanemaadi Ellara Gunagalanu – Ava
Rellara Munde Toripa Korateyadillada Kannadiyu
3. Devaru Kotta Aatmada Khadga Devara Ghanaveda – Idu
Bhaavagalannu Chhedisuvantha Yehovana Aayudhavu
4. Shodhaneyannu Jeevada Vaakyada Bodhaneyim Jaisi – Mruti
Baadheya Veleyalliyoo Adara Bodhane Aashrayavu
5. Devara Vaakyava Snehisi Naavu Paavanamaargadolu – Namma
Jeevada Kaaladolellavu Nadeyalu Bhaavava Maaduvevu