ಸ್ತೋತ್ರ 80 Shubhadinave Namma Shokava Tegedu ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಶುಭದಿನವೇ ನಮ್ಮ ಶೋಕವ ತೆಗೆದು
ಅಭಯವನೀವ ಸಂತೋಷದ ದಿನವೇ
ವಿಭವದಿ ಗೆದ್ದನು ಯೇಸು ಮರಣವ
ಶುಭವಾಯಿತು ಬುವಿಗೀದಿನವು
1. ಸ್ವರಗಳನೆತ್ತಿ ಗಂಭೀರದಿ ಪಾಡಿರಿ
ಹರುಷಿಪುದೀಗಲು ಈ ಜಗವು
ಹಿರಿದಿಹ ಜಯವನಾಂತಿರುವನು ಯೇಸು
ಪರಮಮಹಿಮೆಯಿಂದಾಳ್ವನು ಜಗವ
2. ಸಂದ ಕ್ರೈಸ್ತಗಣ ಸತ್ತಿಹರೆಂದು
ಮುಂದೆ ಶೋಕಿಸಲಾಗದು ನಮಗೆ
ಒಂದು ಕಾರಣವು ಸಾವು ನಿದ್ರೆ ಮ
ತ್ತೊಂದು ಸಮಾಧಿಯು ಹಾಸಿಗೆಯೇ
3. ರಕ್ಷಕನೆದ್ದನು ಏಳ್ವೆವು ನಾವು
ತಕ್ಷಣ ಮೋಕ್ಷವನೀಕ್ಷಿಪೆವು
ರಕ್ಷಕನಂದು ಜಯಿಸಿದುದರಿಂದ
ಅಕ್ಷಯಶಾಂತಿ ಸಂತೋಷಗಳಿಹವು
4. ಮರಣವೆಂಬದು ಬಹಿಷ್ಕ್ರುತಿಯಲ್ಲ
ಪರಲೋಕದ ವಿಶ್ರಾಂತಿಯದಹುದು
ಮುರುಕವಲ್ಲವದು ಪಿರಿದಿಹ ನೆಮ್ಮದಿ
ಗುರು ಯೇಸುವಿನೊಳು ವರಜೀವನವು
5. ಗುರುಧ್ವಜ ಪೋಪೆಡೆಯೆಲ್ಲವು ಸುಖವೇ
ಗುರು ನಡಿಸಲೆಮಗೆ ಜಯವು ನಿಶ್ಚಯವೇ
ಗುರು ಬಲಹಸ್ತ ವೆಮ್ಮೊಂದಿಗಿರುತ್ತಿರೆ
ಗುರು ಪೋಗಿರೆ ಮುಂದೆ ಬನ್ನಿರಿ ಭಕ್ತರೇ
Shubhadinave Namma Shokava Tegedu
Abhayavaneeva Santoshada Dinave
Vibhavadi Geddanu Yesu Maranava
Shubhavaayitu Buvigeedinavu
1. Swaragalanetti Gambheeradi Paadiri
Harushipudeegalu Ee Jagavu
Hiridiha Jayavanaantiruvanu Yesu
Paramamahimeyindaalvanu Jagava
2. Sanda Kraistagana Sattiharendu
Munde Shokisalaagadu Namage
Ondu Kaaranavu Saavu Nidre ma
Ttondu Samaadhiyu Haasigeye
3. Rakshakaneddanu Elvevu Naavu
Takshana Mokshavaneekshipevu
Rakshakanandu Jayisidudarinda
Akshayashaanti Santoshagalihavu
4. Maranavembadu Bahishkrutiyalla
Paralokada Vishraantiyadahudu
Murukavallavadu Piridiha Nemmadi
Guru Yesuvinolu Varajeevanavu
5. Gurudhwaja Popedeyellavu Sukhave
Guru Nadisalemage Jayavu Nishchayave
Guru Balahastavemmondigiruttire
Guru Pogire Munde Banniri Bhaktare