ಸ್ತೋತ್ರ 78 Yesu Kartanu Maranava Jayisi ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಯೇಸು ಕರ್ತನು ಮರಣವ ಜಯಿಸಿ
ಭಾಸುರಾಂಗನತಿಹಿತವನು ಗೈದನು
ಈಶ ಪ್ರೇಮಾರ್ಥವ ಜಗಕೆಲ್ಲ
ಲೇಸಿನಿಂದರುಹೆ ಗುರುವರ ಶುಭಕರ
1. ಗೋರಿಯೊಳಿಟ್ಟರು ಗುರುವರನಂ
ಮೂರು ದಿನಗಳ ನಂತರವು
ಏರಿ ಮಹಿಮೆಯೊಳು ತೋರಿ ದರುಶನವ
ದಾರಿಗಾಣದಿಹ ಭಕ್ತಸಮೂಹಕೆ
2. ಪಾಪದ ಭಾರವು ನೀಗಿದುದು
ಭೂಪನೇಸು ಸಂತಾಪಿಸಲು
ಶಾಪಹರಿಸಿ ಅಪಾರ ಕೃಪೆಯೊಳು
ಆಪದ್ಬಾಂಧವನು ಮೃತಿಯನು ಪೊಂದಲು
3. ಭಾವಿಸೆ ಪಾವನ ಮಾರ್ಗವದು
ಸಾವಿನಿಂದಲೇ ಕಾಣುವದು
ಜೀವನಾಯಕನು ತೋರೀ ಮರ್ಮವನು
ನಾವು ಸ್ವರ್ಗದೊಳು ಸೇರ ಮಾಡಿಹನು
4. ಭಯವನು ಹರಿಸುತ ಶರಣರಿಗೆ
ಪಯಣಭಾರದಿ ನಡೆದವರಿಗೆ
ದಯದ ಕರ್ತ ತಾನಭಯವೀಯುತೆ
ಜಯದ ಮಾರ್ಗದೊಳು ನಡಿಪನು ದಿಟವಿದು
5. ಜಯದಾನಂದವ ಪೊಂದುತಲಿ
ಜಯದ ಗೀತವ ಪಾಡುತಲಿ
ಜಯದ ಕರ್ತನ ಪಾದಕಮಲಕೆ
ನಯವಿನಯದೊಳು ಎಮ್ಮನರ್ಪಿಸುವ
Yesu Kartanu Maranava Jayisi
Bhaasuraanganatihitavanu Gaidanu
Eesha Premaarthava Jagakella
Lesinindaruhe Guruvara Shubhakara
1. Goriyolittaru Guruvaranam
Mooru Dinagala Nantaravu
Eri Mahimeyolu Tori Darushanava
Daarigaanadiha Bhaktasamoohake
2. Paapada Bhaaravu Neegidudu
Bhoopanesu Santaapisalu
Shaapaharisi Apaarakrupeyolu
Aapadbaandhavanu Mrutiyanu Pondalu
3. Bhaavise Paavana Maargavadu
Saavinindale Kaanuvadu
Jeevanaayakanu Toree Marmavanu
Naavu Swargadolu Sera Maadihanu
4. Bhayvanu Harisuta Sharanarige
Payana Bhaaradi Nadedavarige
Dayada Karta Taanabhayaveeyute
Jayada Maargadolu Nadipanu Ditavidu
5. Jayadaanandava Pondutali
Jayada Geetava Paadutali
Jayada Kartana Paadakamalake
Nayavinayadolu Emmanarpisuva