ಸ್ತೋತ್ರ 61 Guruve Ninnondige – Parishuddagiriyolu ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಗುರುವೇ ನಿನ್ನೊಂದಿಗೆ – ಪರಿಶುದ್ದಗಿರಿಯೊಳು
ಇರುವದು ಎಮಗದೆ – ನಿರುತ ಲೇಸೆನಿಪುದು
ಪರಿಶುದ್ದ ವಾತಾ – ವರಣದೆ ಚರಿಸುತ
ಧರಣಿಯ ಚಿಂತೆಯ – ಮರೆಯುತ ಮೆರೆವೆವು
1. ಭಯ ಶಂಕೆ ದುಗುಡಗಳ್ – ಲಯಗೈಯೆ ಬಂದರೂ
ಭಯವದೆಂ ದೇವನೇ – ದಯಪೂರ್ಣ ಜೀವನೆ
ಜಯದಧಿಪನ ಆ – ಶ್ರಯದೊಳಗಿರುವದು
ಪ್ರಿಯಕರವಾಗಿದೆ – ಜಯಗುರುಶಿಷ್ಯರ್ಗೆ
2. ಇದುವೇ ಸೈತಾನನು – ಎದುರಾಯಿಸುವ ತಳ
ವಿದುವೇ ಪ್ರಜ್ವಲಿಸುವ – ನುಡಿಕೇಳ್ದ ಮಾತಲ
ಬೆದರದೆ ಹೆದರದೆ – ಸದಯನ ಜತೆಯೊಳು
ಮುದದಿಂದಲುನ್ನತ – ಪದವೇರಿ ಚರಿಪೆವು
3. ಪ್ರಭುರೂಪಾಂತರವದು – ಪ್ರಭೆಯುತವಾದುದು
ಶುಭಚಿನ್ಹೆಯಾಗಿದೆ – ಸಭಾರೂಪಾಂತರಕೆ
ಪ್ರಭೆಯಿಂದ ಪ್ರಜೆಗೆ – ಕೃಪೆಯಿಂದ ಕೃಪೆಗೆ
ವಿಭವದಿಂದೇರಿಸು – ಸೊಭಗಿನಿಂ ರಾಜಿಸೆ
4. ಇವನೆನ್ನ ಕುವರನು – ಕಿವಿಗೊಡಿರೀತಗೆಂದು
ಅವನಿಯೊಳ್ಕೇಳಿದ – ದಿವಲೋಕವಾಣಿಗೆ
ಅವನತರಾಗಿಯೇ – ಜವದಿ ಮಣಿವೆವು
ಭಯವನ್ನು ಹರಿಸುತ – ನವಗುಣವೀಯುವ
5. ಬಲಗುಂದಿ ಹೋದರೂ – ಫಲಗಾಣದಿದ್ದರೂ
ಒಲುಮೆಯ ರಕ್ಷಕ – ನೊಲುಮೆಯು ತಪ್ಪದು
ಮಳೆಯೊಳು ಕೇಳಿದ – ಲಲಿತವಚನಧ್ವನಿ
ಬಲವಾಗಿ ನಂಬುತ – ನಲವಿನಿಂ ನಡೆವೆವು
Guruve Ninnondige – Parishuddagiriyolu
Iruvadu Emagade – Niruta Lesenipudu
Parishudda Vaataa – Varanade Charisuta
Dharaniya Chinteya – Mareyuta Merevevu
1. Bhaya Shanke Dugudagal – Layagaiye Bandaroo
Bhayavadem Devane – Dayapoorna Jeevane
Jayadadhipana Aa – Shrayadolagiruvadu
Priyakaravaagide – Jayagurushishyarge
2. Iduve Saitaananu – Eduraayisuva Tala
Viduve Prajvalisuva – Nudikelda Maatala
Bedarade Hedarade – Sadayana Jateyolu
Mudadindalunnata – Padaveri Charipevu
3. Prabhuroopaantaravadu – Prabheyutavaadudu
Shubhachinheyaagide – Sabhaaroopaantarake
Prabheyinda Prajege – Krupeyinda Krupege
Vibhavadinderisu – Sobhaginim Raajise
4. Ivanenna Kuvaranu – Kivigodireetagendu
Avaniyolkelida – Divalokavaanige
Avanataraagiye – Javadi Manivevu
Bhayavannu Harisuta – Navagunaveeyuva
5. Balagundi Hodaroo – Phalagaanadiddaroo
Olumeya Rakshaka – Nolumeyu Tappadu
Maleyolu Kelida – Lalitavachanadhwani
Balavaagi Nambuta – Nalavinim Nadevevu