ಸ್ತೋತ್ರ 59 Nambu Manujaa Nodade ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ನಂಬು ಮನುಜಾ ನೋಡದೆ ನಂಬು ನಂಬು
1. ಪರಮಲೋಕದಿಂದ ಬಂದು ನರನ ರೂಪ ತಾಳಿ ನಿಂದು
ಧರಣಿಯಲ್ಲಿ ಹುಟ್ಟಿದಂಥ ಮರಿಯ ಪುತ್ರ ಯೇಸುವನ್ನು
2. ಬಡವರಾದ ಜನರು ಕಷ್ಟಪಡುವದನ್ನು ನೋಡಿ ಮಾನವ
ಪೆಡಸು ಮಾಡಿಕೊಳ್ಳಲೊಲ್ಲದೊಡನೆ ಕರುಣಿಪೇಸುವನ್ನು
3. ರೋಗದೆವ್ವಗಳಿಂದ ಪೀಡಿತರಾಗಿ ನರಳುವವರ ಮೇಲೆ
ಬೇಗ ಕರುಣೆಯಿಟ್ಟು ಬಲವನಾಗ ತೋರಿದೇಸುವನ್ನು
4. ಸಕಲಜನರ ಧರ್ಮಕರ್ಮ ನಿಕರಪಾಪಪುಣ್ಯಗಳನ್ನು
ಮುಕುರದೊಳಗೆ ತೋರುವಂತೆ ಪ್ರಕಟಮಾಡುವೇಸುವನ್ನು
5. ನರನೇ ಈಗ ಬುದ್ದಿ ತಂದು ಮರೆಯದೇಸು ಪದವ ನಂಬಿ
ಕರುಣೆಯನ್ನು ಬೇಡಿ ನಿನ್ನ ಮರಣವನ್ನು ಜೈಸುವದಕ್ಕೆ
Nambu Manujaa Nodade Nambu Nambu
1. Paramalokadinda Bandu Narana Roopa Taali Nindu
Dharaniyalli Huttidantha Mariya Putra Yesuvannu
2. Badavaraada Janaru Kashtapaduvadannu Nodi Manava
Pedasu Maadikolllolladodane Karunipesuvannu
3. Rogadevvagalinda Peeditaraagi Naraluvavara Mele
Bega Karuneyittu Balavanaaga Toridesuvannu
4. Sakalajanara Dharmakarma Nikarapaapapunyagalannu
Mukuradolage toruvante Prakatamaaduvesuvannu
5. Narane Eega Buddi Tandu Mareyadesu Padava Nambi
Karuneyannu Bedi Ninna Maranavannu Jaisuvadakke