ಸ್ತೋತ್ರ 50 Aaru Banniparu Kristaa Kaarunya Nidhiye ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಆರು ಬಣ್ಣಿಪರು ಕ್ರಿಸ್ತಾ ಕಾರುಣ್ಯ ನಿಧಿಯೇ
ಮೀರಿದ ನಿನ್ನವತಾರದ ಮಹಿಮೆಯ ಆರು ಬಣ್ಣಿಪರೈ
1. ಪೊರೆಯಲೀ ಪೊಡವಿಯ ಕ್ರಿಸ್ತಾ ನೀ ತೊರೆದು ವೈಭವವಂ
ಭರದಿ ಜನಿಸಿದೆ ವರನಾರಿಯುದರದಿ ಮೆರೆಯುತ ತೇಜದಿಂ
2. ಪುಟ್ಟಿದ ರಾತ್ರಿಯೊಳ್ ಕ್ರಿಸ್ತಾ ಆ ದಿಟ್ಟಗಂದರರು
ಅಟ್ಟಹಾಸದಿ ಪೇಳಲು ವಾರ್ತೆಯ ಥಟ್ಟನೈತಂದರು
3. ಅಂದದ ವಾರ್ತೆಯನಂದು ಆ ಗಂದರರು ಪೇಳಲು
ಬಂದರೊಡನೆಯೇ ಪುರಬೆತ್ಲೇಹೇಮಿಗೆ ವಂದಿಸೆ ಕುರುಬರು
4. ಈಕ್ಷಿಸಿ ತಾರೆಯಂ ಆಗ ಅತಿ ಸೂಕ್ಷ್ಮದಿಂ ಪಂಡಿತರು
ಆ ಕ್ಷಣದೊಳು ಪೊರಟರು ನಮಿಸಲು ಮೋಕ್ಷಾಧಿಪತಿಯಂ
5. ಸರ್ವ ಧಾರಿಣಿಗೆ ಕ್ರಿಸ್ತಾ ನಿಜ ಸಾರ್ವಭೌಮ ನೀ
ಸರ್ವ ಮಹಿಮೆಯ ಪೊರೆದ ನಿನ್ನಂಘ್ರಿಗೆ ಸರ್ವರೂ ಎರಗಲಿ
…End…
Aaru Banniparu Kristaa Kaarunya nidhiye
Meerida Ninnavataarada Mahimeya aaru Banniparai
1. Poreyalee Podaviya Kristaa Nee Toredu Vaibhavavam
Bharadi Janiside Varanaariyudaradi Mereyuta Tejadim
2. Puttida Raatriyol Kristaa Aa Dittagandararu
Attahaasadi Pelalu Vaarteya Thattanaitandaru
3. Andada Vaarteyanandu Aa Gandararu Pelalu
Bandarodaneye Purabetlehemige Vandise Kurubaru
4. Eekshisi Taareyam Aaga Ati Sookshmadim Panditaru
Aa Kshanadolu Porataru Namisalu Mokshaadhipatiyam
5. Sarva Dhaarinige Kristaa Nija Saarvabhauma Nee
Sarva Mahimeya Poreda Ninnanghrige Sarvaroo Eragali
…End…