ಸ್ತೋತ್ರ 229 Jayamangalam Nitya Shubhamangalam ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಜಯಮಂಗಳಂ ನಿತ್ಯ ಶುಭಮಂಗಳಂ
1. ದಯವಾಂತ ಶಾಂತನಿಗೆ ನಯಗುಣೋಪೇತನಿಗೆ
ನಿಯತಮಹಿಮೇಶನಿಗೆ ಲಯವಿಹೀನನಿಗೆ
ನಿಯಮಪರಮೋನ್ನತಗೆ ಭಯಪಾಪರಹಿತನಿಗೆ
ಜಯಘೋಷಸಂಸ್ತೋತ್ರಮಯ ಯೆಹೋವನಿಗೆ
2. ಪೂಜೆಗೊಳ್ಳುವ ನಿತ್ಯ ಮೂಜಗದ ಕರ್ತನಿಗೆ
ತೇಜೋವಿರಾಜಿತಗೆ ಸೌಜನ್ಯಮೂರ್ತಿಗೆ
ರಾಜಾಧಿರಾಜನಿಗೆ ಸೋಜಿಗದೊಳೊಗೆದನಿಗೆ
ಯಾಜಕ ಲಲಾಮನಿಗೆ ಶ್ರೀಜನಾರ್ಜಿತಗೆ
3. ಧರಣಿಭಕ್ತರ ಮನದಿ ನಿರುತ ನೆಲೆಗೊಂಡು ಬಹು
ದುರಿತ ಸಮುದಾಯವ ಪರಿಹರಿಸುವಾತ್ಮನಿಗೆ
ವರಕಟಾಕ್ಷವ ಬೆಳಗಿ ಪರಧರ್ಮಬೋಧೆಯಂ
ಪರಿಪರಿಯೊಳಾಗಿಸುವ ಪರಿಶುದ್ದಾತ್ಮನಿಗೆ
Jayamangalam Nitya Shubhamangalam
Dayavaanta Shaantanige Nayagunopetanige
Niyatamahimeshanige Layaviheenanige
Niyamaparamonnatage Bhayapaapa rahitanige
Jayaghosha samstotramaya Yehovanige
Poojegolluva Nitya Moojagada Kartanige
Tejoviraajitage Soujanyamoortige
Raajaadhi raajanige Sojigado logedanige
Yaajaka Lalaamanige Shreejanaarjitage
Dharanibhaktara Manadi Niruta Nelegondu Bahu
Durita Samudaayava Pariharisu vaatmanige
Varakataakshava Belagi Paradharma bhodheyam
Paripariyolaagisuva Parishuddaatmanige