ಸ್ತೋತ್ರ 210 Elo Elo Enmanave Eludayakke Munche ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಏಳೋ ಏಳೋ ಎನ್ಮನವೇ ಎಳುದಯಕ್ಕೆ ಮುಂಚೆ
ಮೂಲಪರದೇವರನೋಲೈಸಿ ನುತಿಸೆಲೋ
1. ದೇವನಾಮವ ಪಾಡಿ ಭುವನ ಭಕ್ತರ ಕೂಡಿ
ಪಾವನ ಸೇವೆಯ ಮಾಡಿ ಈವಾಗ ನುತಿಸೆಲೋ
2. ಹೃದಯ ಪೂರ್ತಿಯೊಳೆದ್ದು ವದನ ತೆರೆದು ನಿನ್ನ
ಉದಯವಂದನೆ ಗೈದು ಮುದದಿಂದ ನುತಿಸೆಲೋ
3. ಕತ್ತಲೆ ಸ್ಥಳದಲ್ಲಿ ಸತ್ತವನಂತಿದ್ದಿ ನೀ
ಸುತ್ತಲು ಕಾದ ನಿನ್ನ ಕರ್ತನ ನುತಿಸೆಲೋ
4. ಇರುಳಿನ ಬಾಧೆಗಳ ಹರಿಸಿ ನಿನ್ನನೆಬ್ಬಿಸಿದ
ಕರುಣಾಳುವಿನ ದಿವ್ಯಚರಣವ ನುತಿಸೆಲೋ
5. ನಿನ್ನಪರಾಧವೆಲ್ಲಾ ಇನ್ನು ಸಹಿಸೀ ದಿನವ
ಕಣ್ಣಿಗೆ ತೋರಿಸಿದ ಪುಣ್ಯವ ನುತಿಸೆಲೋ
6. ದೇಹಸಂಬಂಧವಾದ ಸಾಹಿತ್ಯವೆಲ್ಲಾ ನೆನೆದು
ಸ್ನೇಹದಾತ್ಮ ವರವನೂಹಿಸಿ ನುತಿಸೆಲೋ
7. ಯೇಸು ನಾಮವ ನೆನಸಿ ಹಾಸಿಗೆಯಿಂದಲೆದ್ದು
ದಾಸನಂತೆ ಭಕ್ತಿಯೊಳ್ ವಾಸಿಸಿ ನುತಿಸೆಲೋ
Elo Elo Enmanave Eludayakke Munche
Moolaparadevaranolaisi Nutiselo
1. Devanaamava Paadi Bhuvana Bhaktara Koodi
Paavana Seveya Maadi Eevaaga Nutiselo
2. Hrudaya Poortiyoleddu Vadana Teredu Ninna
Udayavandane Gaidu Mudadinda Nutiselo
3. Kattale Sthaladalli Sattavanantiddi Nee
Suttalu Kaada Ninna Kartana Nutiselo
4. Irulina Baadhegala Harisi Ninnanebbisida
Karunaaluvina Divyacharanava Nutiselo
5. Ninnaparaadhavella Innu Sahisee Dinava
Kannige Torisida Punyava Nutiselo
6. Dehasambandhavaada Saahityavellaa Nenedu
Snehadaatma Varavanoohisi Nutiselo
7. Yesu Naamava Nenasi Haasigeyindaleddu
Daasanante Bhaktiyol Vaasisi Nutiselo