ಸ್ತೋತ್ರ 195 Devara Makkalige Ide Jeevavu Paradolage ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ದೇವರ ಮಕ್ಕಳಿಗೆ ಇದೆ ಜೀವವು ಪರದೊಳಗೆ
ದೇವ ಭಕ್ತರ ದೀವಿಸಿ ಭಾಗ್ಯವ
ನೀವನು ಭಾವಿಸಿರೈ
1. ತಂದೆಯ ರಾಜ್ಯದೊಳು ಇವೆ ಚಂದದ ವಾಸಗಳು
ಕುಂದದ ಕ್ಷೇಮದ ಸುಂದರಸ್ಥಾನವ
ಹೊಂದಲು ಸೇರುವಿರೈ
2. ಅಲ್ಲಿ ಕಣ್ಣೀರಿರದು ಅವರಿಲ್ಲಿನ ಎಡರಳಿದು
ಎಲ್ಲರು ಹರುಷಿಸಿ ಅಲ್ಲಿ ದುಃಖಾದಿಗ
ಳೆಲ್ಲವ ನೀಗಿಪರೈ
3. ಕೂಡಿ ಪರಾತ್ಪರನ ಸ್ತುತಿಮಾಡಿ ಕೃಪಾನ್ವಿತನ
ಬೇಡುವ ಜನರಿಗೆ ನೀಡಿದ ವರಗಳ
ಪಾಡುತ ಸಾರುವೆವೈ
Devara Makkalige Ide Jeevavu Paradolage
Deva Bhaktara Deevisi Bhaagyava
Neevanu Bhaavisirai
1. Tandeya Raajyadolu Ive Chandada Vaasagalu
Kundada Kshemada Sundarasthaanava
Hondalu Seruvirai
2. Alli Kanneeriradu Avarillina Edaralidu
Ellaru Harushisi Alli Dukhaadiga
Lellava Neegiparai
3. Koodi Paraatparana Stutimaadi Krupaanvitana
Beduva Janarige Needida Varagala
Paaduta Saaruvevai