ಸ್ತೋತ್ರ 191 Poguve Naa Vegavaagi Raagadeshake ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಪೋಗುವೆ ನಾ ವೇಗವಾಗಿ ರಾಗದೇಶಕೆ
ಕೂಗ ಕೆಳುತೀಗ ದಿವ್ಯ ಭಾಗದೇಯಕೆ
1. ಪ್ರತ್ಯವಾಯ ಹತ್ಯವಾದ ಸತ್ಯಲೋಕಕೆ
ಅತ್ಯುತ್ತಮಬೃತ್ಯರ್ಗಾದ ನಿತ್ಯಜೀವಕೆ
2. ವಂದನೀಯ ತಂದೆಯನ್ನು ಎಂದೂ ಕಾಣಲು
ಮುಂದೆ ಮೋಕ್ಷಾನಂದವನ್ನು ಹೊಂದಿಕೊಳ್ಳಲು
3. ರಕ್ತದಿಂದ ಮುಕ್ತಿ ತೆರೆದ ಶಕ್ತನ ನೋಡಲು
ಭಕ್ತರಿಗನುರಿಕ್ತವಾದ ವ್ಯಕ್ತಿ ಪಡೆಯಲು
4. ದುರಿತವನ್ನು ಹರಿಸುವಂಥ ಪರಿಶುದ್ದಾತ್ಮನ
ಪರದಲ್ಲಿಯೇ ದಾರುಶಿಸಲಿಕ್ಕೆ ಕರುಣೆಯಾತ್ಮನ
5. ನಿಷ್ಠೆಗಾಗಿ ಎಷ್ಟೋ ವಿಧದಿ ಕಷ್ಟ ಸಹಿಸಿದ
ಶಿಷ್ಟರೊಂದಿಗಿಷ್ಟವಾದ ತುಷ್ಟಿಯ ಹೊಂದ
6. ವರದ ಸೌಖ್ಯಭರಿತವಾದಿ ಪರಮನಗರಿಗೆ
ಧರಣಿಭ್ರಮೆಯ ತೊರೆದುಬಿಟ್ಟು ಮೆರೆಯಲಲ್ಲಿಗೆ
7. ದುರುಳರನ್ನು ಹರುಷಕಿನ್ನು ಕರೆದು ತೋರುವೆ
ಶರಣರೊಡನೆ ಗುರುತ್ರಯೈಕಗೆರಗಿ ಸಾರುವೆ
Poguve Naa Vegavaagi Raagadeshake
Kooga Keluteega Divya Bhaagadeyake
1. Pratyavaaya Hatyavaada Satyalokake
Atyuttama brutyargaada Nityajeevake
2. Vandaneeya Tandeyannu Endoo Kaanalu
Munde Mokshaanandavannu Hondikollalu
3. Raktadinda Mukti Tereda Shaktana Nodalu
Bhaktariganuriktavaada Vyakti Padeyalu
4. Duritavannu Harisuvantha Parishuddaatmana
Paradalliye Darushisalikke Karuneyaatmana
5. Nishtegaagi Eshto Vidhadi Kashta Sahisida
Shishtarondigishtavaada Tushtiya Honda
6. Varada Soukhya bharitavaadi Paramanagarige
Dharanibhrameya Toredubittu Mereyalallige
7. Durularannu Harushakinnu Karedu Toruve
Sharanarodane Gurutrayaikageragi Saaruve