ಸ್ತೋತ್ರ 188 Mangala Nija Mangala ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಮಂಗಳ ನಿಜ ಮಂಗಳ ಜಯವೇ ವಧೂವರರೀರ್ವರಿಗೆ
ಮಂಗಳ ನಿಜ ಮಂಗಳ ಜಯವೇ
ಮಂಗಳ ಗುರುವೇಸು ಕರುಣಾ
ಯಿಂಗದಿರಲು ಮೆರೆದು ದಿವ್ಯ
ಸಂಘದೊಳಿರುವಂಗವಾಗಿ
ತುಂಗಜೀವದಿಂದಲಿರಲಿ
1. ಕಾಣದ ಪ್ರಸ್ತ ದೊಳೇಸುವು ಅಂದು ಅತಿಥಿಯಾಗಿ
ತಾನೇ ಪ್ರಸನ್ನದಯ ತೋರಿದನು
ಮಾನವರೊಳು ಮದುವೆಯೆಂಬುದು
ಮಾನವಾದದ್ದೆಂದು ತಿಳಿಸೆ
ದೋಣಿಯಲ್ಲಿನ ನೀರ ತರಿಸಿ
ತಾನೇ ದ್ರಾಕ್ಷಾರಸ ಮಾಡಿದನು
2. ಬೃತ್ಯನಬ್ರಹಾಮ್ ಸಾರಳೀರ್ವರನ್ನು ವರ್ಧಿಸಿದ ದೇವರು
ನಿತ್ಯದಲ್ಲೂ ಪರಾಂಬರಿಸುವನು
ಸ್ತುತ್ಯನ ಪಾದವ ನಂಬಿವರೀರ್ವರು
ಕೃತ್ಯದೊಳೆಂದಿಗೂ ಭಕ್ತಿಯ ಸಾಧಿಸಿ
ಸತ್ಯಕುಲಸಂತಾನಮೂಲವಾಗಿ
ನಿತ್ಯವೂ ಕ್ರಿಸ್ತನ ನೆರಳೊಳಿರಲಿ
3. ಬಾಳಿ ಜೀವಕಾಲವೆಲ್ಲವೂ ಪರಿಶುದ್ಧತ್ವದಲ್ಲಿ
ಪೇಳಲಾಗದಾನಂದವಾಂತು
ಬಾಳಿ ನಿತ್ಯ ಕಲ್ಯಾಣನಿಧಿಯೊಳ್
ಮೇಳಿಸಿ ಬಂಧುಬಳಗಕುಟುಂಬ
ತಾಳಿ ಸಹಿತ ಬಾಳಿ ಕಡೆಗೆ
ಮೌಳಿಹೊಂದಲಮರರೊಳಗೆ
Mangala Nija Mangala Jayave Vadhoovarareervarige
Mangala Nija Mangala Jayave
Mangala Guruvesu Karuna
Yingadiralu Meredu Divya
Sanghadoliruvangavaagi
Tungajeevadindalirali
1. Kaanada Prastadolesuvu Andu Atithiyaagi
Taane Prasannadaya Toridanu
Maanavarolu Maduveyembudu
Maanavaadaddendu Tilise
Doniyallina Neera Tarisi
Taane Draakshaarasa Maadidanu
2. Brutyanabrahaam Saaraleervarannu Vardhisida Devaru
Nityadalloo Paraambarisuvanu
Stutyana Paadava Nambivareervaru
Krutyadolendigoo Bhaktiya Saadhisi
Satyakula santaana moolavaagi
Nityavoo Kristana Neralolirali
3. Baali Jeevkaalavellavoo Parishuddatvadalli
Pelalaagadaananda vaantu
Baali Nitya Kalyaananidhiyol
Melisi Bandhubalaga kutumba
Taali Sahita Baali Kadege
Moulihondala mararolage