ಸ್ತೋತ್ರ 153 Echhara Gondesuve Ninna Nechhi ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಎಚ್ಚರಗೊಂಡೇಸುವೇ ನಿನ್ನ ನೆಚ್ಚಿ ಸಮಯವ ಕಳೆಯುವೆ
ಹುಚ್ಚು ಕನ್ಯೆಯರೆಚ್ಹತ್ತಿರದೆ ವೆಚ್ಹ ಮಾಡಿದರಾದರು
ತುಚ್ಚರೆಲ್ಲ ದುರಿಚ್ಚೆಯಲ್ಲಿಯೇ ಮೆಚ್ಚಿ ರಾತ್ರಿಯ ಕಳೆದರು
1. ನಿನ್ನ ಕಾಲವ ನಿನಗೆ ಕಳೆಯುವದೆನ್ನ ಮೇಲಣ ಭಾರವು
ಉನ್ನತಪದವನ್ನು ದೃಷ್ಟಿಸಿ ನಿನಗೊಪ್ಪಿಸುವೆನು
ನಿನ್ನ ಕೃಪೆಯಿಂದೆನ್ನ ನಡಿಸಿ ಮನ್ನಿಸಿ ಎನ್ನಘವನು
2. ಬದ್ದ ವರವ ನೀನೀವ ತನಕ ನಿದ್ದೆ ಬಾರದು ಸ್ವಾಮಿಯೇ
ಎದ್ದು ಅರ್ಧರಾತ್ರಿಯೊಳ್ ಭಕ್ತರೊಡನೆ ಶಬ್ದದಿ ಕೂಗುವೆ
ಶುದ್ದ ಕೃಪೆಯಿಂ ಹರಸಿದರೆ ನಾ ಸಿದ್ದನಾಗಿಯೆ ಹೋಗುವೆ
3. ಮನವನೆಬ್ಬಿಸಿ ಹಾಡಿಸು ನಿನ್ನ ಘನವ ನೆನೆದು ಕೊಂಡಾಡಿಸು
ತನುಮನಂಗಳ ನಿನಗೆ ಅರ್ಪಿಸಿ ವಿನಯಗುಣದಿಂ ಬದುಕಿಸು
ತೊನೆದು ನಿನ್ನ ಸುಪುಣ್ಯದಿಂದಲೆ ಎನಗೆ ಭಾಗ್ಯವ ಪಾಲಿಸು
Echhara gondesuve Ninna Nechhi Samayava Kaleyuve
Huchhu Kanyeyarechhattirade Vechha Maadidaraadaru
Tuchharella Durichheyalliye Mechhi Raatriya Kaledaru
1. Ninna Kaalava Ninage Kaleyuvadenna Melana Bhaaravu
Unnatapadavannu Drushtisi Ninagoppisuvenu
Ninna Krupeyindenna Nadisi Mannisai Ennaghavanu
2. Badda Varava Neeneeva Tanaka Nidde Baaradu Swaamiye
Eddu Ardharaatriyol Bhaktarodane Shabdadi Kooguve
Shudda Krupeyim Harasidare Naa Siddanaagiye Hoguve
3. Manavanebbisi Haadisu Ninna Ghanava Nenedu Kondaadisu
Tanumanangala Ninage Arpisi Vinayagunadim Badukisu
Tonedu Ninna Supunyadindale Enage Bhaagyava Paalisu