ಸ್ತೋತ್ರ 124 Bandenayyaa Swaamiye – Binnahavannu ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಬಂದೆನಯ್ಯಾ ಸ್ವಾಮಿಯೇ – ಬಿನ್ನಹವನ್ನು
ತಂದೆನಯ್ಯಾ ಪ್ರೇಮಿಯೇ
ಹಿಂದೆಯೂ ಮುಂದೆಯೂ ಒಂದಾಸರೆಯ ಕಾಣೆ
ಕುಂದು ಮುನ್ನಿಸುತೀಯೈ ಚಂದದ ಕೃಪೆಯನ್ನು
1. ತೊರೆದು ಬಿಸಾಡುತ ಪರಿಶುದ್ದ ವಿಧಿಗಳ
ಜರಿದೆ ನಿನ್ನಭಯಗಳ
ತರಳತನದಿ ದಿವ್ಯ ಸ್ಮರಣೆಯ ಬಿಟ್ಟಂಥ
ದುರಿತಗಳೆಲ್ಲವನರಿಕೆಯ ಮಾಡಲು
2. ರೋಗಿಷ್ಟ ನೈದಿದೆ ನೀ ಘನವೈದ್ಯನು
ನೀಗಿಸು ಬಾಧೆಯನು
ಬೇಗನೆ ಧರಣಿಯ ಭೋಗಂಗಳು ಮಾಯ
ವಾಗಿ ಹೋಗುವದಕ್ಕಾಗಿಯೇ ನಾ ಕೆಟ್ಟು
3. ದುಷ್ಟತ್ವದಿಂದಾದ ಕಷ್ಟಭಾರವನ್ನು
ಎಷ್ಟೆಂದು ಷಹಿಸುವೆನು
ಭ್ರಷ್ಟಲೋಕದಲ್ಲಿ ತುಷ್ಟಿಯೇನಿಲ್ಲವು
ಇಷ್ಟಪೂರ್ತಿಯ ಹೊಂದಿ ಶಿಷ್ಟನಾಗುವದಕ್ಕೆ
4. ಉದ್ದತ ಮನವನ್ನು ತಿದ್ದಿ ವಿಮೋಚಿಸು
ಶ್ರದ್ದೆಯನ್ನು ಪಾಲಿಸು
ಬುದ್ದಿಹೀ ನತೆಯಿಂದ ಬದ್ದವಿಷಯರೊಳ
ಗಿದ್ದೇಕನಾದವನುದ್ದಾರವಾಗಲು
5. ಒಡೆಯನೇ ಕರುಣಿಸು ಕಡು ನೋವು ಪಟ್ಟೆನು
ತಡಮಾಡದಂತೆನನ್ನು
ಬಿಡದೆ ದಾಸನ ಕರವ ಹಿಡಿದು ರಕ್ಷಿಪೆಯೆಂದು
ದೃಢವಾದ ನಂಬಿಕೆ ಪಡೆದುಕೊಂಡವನಾಗಿ
Bandenayyaa Swaamiye – Binnahavannu
Tandenayyaa Premiye
Hindeyoo Mundeyoo Ondaasareya Kaane
Kundu Munnisuteeyai Chandada Krupeyannu
1. Toredu Bisaaduta Parishudda Vidhigala
Jaride Ninnabhayagala
Taralatanadi Divya Smaraneya Bittantha
Duritagalellavanarikeya Maadalu
2. Rogishta Naidide Nee Ghanavaidyanu
Neegisu Baadheyanu
Begane Dharaniya Bhogangalu Maaya
Vaagi Hoguvadakkaagiye Naa Kettu
3. Dushtatvadindaada Kashtabhaaravannu
Eshtendu Sahisuvenu
Bhrashtalokadalli Tushtiyenillavu
Ishtapoortiya Hondi Shishtanaaguvadakke
4. Uddata Manavannu TiddiVimochisu
Shraddeyannu Paalisu
Buddiheenateyinda Baddavishayarola
Giddeka naadava nuddaaravaagalu
5. Odeyane Karunisu Kadu Novu Pattenu
Tadamaadadantennanu
Bidade Daasana Karava Hididu Rakshipeyendu
Drudhavaada Nambike Padedukondavanaagi