ಸ್ತೋತ್ರ 112 Maanasaantarapadu Paapiye – Ninna ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಮಾನಸಾಂತರಪಡು ಪಾಪಿಯೇ – ನಿನ್ನ
ಪ್ರಾಣ ರಕ್ಷಿಸನೋಡು ಪಾಪಿಯೇ
ಜ್ಞಾನಿಯಾಗಿ ನಿನ್ನ ಹೀನತನವ ಬಿಟ್ಟು
ಆನು ಕರ್ತನೆಡೆಗೆ ದೀನಚಿತ್ತದಿಂದ
1. ಹುಟ್ಟು ಪಾಪ ನಿನ್ನೊಳಿಲ್ಲವೇ – ಬಹು
ಕೆಟ್ಟಪಾತಕಿ ನೀನಲ್ಲವೇ
ಬಿಟ್ಟು ಈ ಕಾಲದ ಮಟ್ಟಿಗೂ ಕಾಣದೆ
ಕೆಟ್ಟು ಹೋಗುವದೇನು ದುಷ್ಟನರನೇ ನೀ
2. ಪಾಪಗಳ ಘ್ನಪ್ತಿ ಮಾಡಿಕೋ – ದೈವ
ಶಾಪದೆಡೆಗೆ ತಪ್ಪನೋಡಿಕೋ
ಕಾಪಥಕರ್ಮಗಳೆಲ್ಲವ ಬಿಟ್ಟು ನೀ
ತಾಪಮನದಿಂದ ತೆಪ್ಪರಿಸಿಕೊಂಡು
3. ಕೇಳು ಕೇಳು ದೈವದ್ರೋಹಿಯೇ – ನೀನು
ಮಾಳುವದು ಬಹು ಪ್ರಿಯವೇ
ನಾಳೆ ಬದುಕುವ ಕಾಲನಿಶ್ಚಯವಿಲ್ಲ
ಪೋಲಿತನವ ಬಿಟ್ಟು ಏಳು ಜಾಗ್ರತೆಪಟ್ಟು
4. ಸತ್ಯವಚನವು ಕೂಗುತ್ತೆ – ಘೋರ
ನಿತ್ಯ ಮರಣವು ಮುಂದಿದೆ
ಸ್ತುತ್ಯಯೇಸುವ ನಂಬಿ ಮರ್ತ್ಯಲೋಕದಲ್ಲಿ
ನಿತ್ಯಜೀವವ ಹೊಂದು ಭಕ್ತರೊಳಗೆ ಕೂಡಿ
Maanasaantarapadu Paapiye – Ninna
Praana Rakshisanodu Paapiye
Gnaaniyaagi Ninna Heenatanava Bittu
Aanu Kartanedege Deenachittadinda
1. Huttu paapa Ninnolillave – Bahu
Kettapaataki Neenallave
Bittu Ee Kaalada Mattigoo Kaanade
Kettu Hogubadenu Dushtanarane nee
2. Paapagala Gnapti Maadiko – Daiva
Shaapadedege Tappanodiko
Kaapathakarmagalellava Bittu Nee
Taapamanadinda Tepparisikondu
3. Kelu Kelu Daivadrohiye – Neenu
Maaluvadu Bahu Priyave
Naale Badukuva Kaalanishchayavilla
Politanava Bittu Yelu Jaagratepattu
4. Satyavachanavu Koogutte- Ghora
Nitya Maranavu Mundide
Stutyayesuva Nambi Martyalokadalli
Nityajeevava Hondu Bhaktarolage Koodi