ಸ್ತೋತ್ರ 109 Paramaagneyannu Dhyaanisu – Meerade Hegoo ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಪರಮಾಜ್ಞೆಯನ್ನು ಧ್ಯಾನಿಸು – ಮೀರದೆ ಹೇಗೂ
ಪರಮಾಜ್ಞೆ ನೆರವೇರಿಸು
1. ಧರೆಯ ಶ್ರುಷ್ಟೀಶ – ಸದ್ಗುರುವೇಕದೇವರಂ
ಹೊರತು ಎಲ್ಲಾದರನ್ಯಾರನು ಸೇವಿಸದಲೆ
2. ನಿರಾಕಾರನಾಗಿಹ ನಿರುಪಮ ಸ್ವಾಮಿಯಂ
ಸ್ಮರಿಸುತ್ತ ಮನದಿಂದ ತೊರೆದು ಮೂರ್ತಿಯನ್ನು
3. ಪರಲೋಕಾಧೀಶನ ವರನಾಮಧೇಯವಂ
ಪರಿಭಾದಿಂದ ಉಚ್ಚರಿಸದೆ ಎಂದಿಗೂ
4. ಪರಿಶುದ್ದ ದಿನದಲ್ಲಿ ಧರೆಯ ಕಾರ್ಯಗಳನ್ನು
ಜರಿಯುತ್ತಲಾತ್ಮಕಾದರಣೆಯಂ ಹೊಂದಲು
5. ವರುಷವು ಹೆಚ್ಚಿ ನೀ ಹರುಷದಿಂ ಜೀವಿಸಲು
ಶರಣಾತಗನಾಗಿ ಇರುತ ಹೆತ್ತವರಿಗೆ
6. ಕರುಣಾರಹಿತನಾಗಿ ನರರಂ ಕೊಲ್ಲದೆ ಮಹಾ
ದುರಿತವೆನಿಸಿದ ಹಾದರವನ್ನು ಮಾಡದೆ
7. ಪರರ ಸ್ವತ್ತುಗಳೆಂದರಿತು ಚೌರ್ಯವ ಬಿಟ್ಟು
ನೆರೆಗೆ ವಿರೋಧವಾಗೊರೆಯದೆ ಸಟೆಯನ್ನು
8. ಕರುಬುವ ಮನದಿಂದ ಪರರಿಗೆ ಸೇರಿದ
ಸ್ಥಿರಚರಧನವನ್ನು ಕುರಿತು ಆಶೆಬೀಳದೆ
9. ಮರೆತರೀ ವಿಧಿಗಳಂ ಬರುತೆ ಶಾಪವು ನಿತ್ಯ
ಧರಿಸಿ ಕೈಕೊಂಡರೆ ದೊರೆವದು ಭಾಗ್ಯವು
Paramaagneyannu Dhyaanisu – Meerade Hegoo
Paramaagne Neraverisu
1. Dhareya Shrushteesha – Sadguruvekadevaram
Horatu Ellaadaranyaranu Sevisadale
2. Niraakaaranaagiha Nirupama Swaamiyam
Smarisutta Manadinda Toredu Moortiyannu
3. Paralokaadheeshana Varanaamadheyavam
Paribhadinda Uchharisade Endigoo
4. Parishudda Dinadalli Dhareya Kaaryagalannu
Jariyuttalaatma kaadaraneyam Hondalu
5.
3Varushavu Hechhi Nee Harushadim Jeevasalu
Sharanaagatanaagi Iruta Hettavarige
6. Karunaarahitanaagi Nararam Kollade Mahaa
Duritavenisida Haadaravannu Maadade
7. Parara Swattugalendaritu Chauryava Bittu
Nerege Virodhavaagoreyade Sateyannu
8. Karubuva Manadinda Pararige Serida
Sthiracharadhanavannu Kuritu Aashebeelade
9. Maretaree Vidhigalam Barute Shaapavu Nitya
Dharisi Kaikondare Dorevadu Bhaagyavu