ಸ್ತೋತ್ರ 207 Preetiya Saagaraa – Hrudayamadhuraa ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಪ್ರೀತಿಯ ಸಾಗರಾ – ಹೃದಯಮಧುರಾ
1. ಸಂದ ಬೇಸಿಗೆಯೊಂದು ದಿನದಿ – ಗಾಸಿ ತಡೆಯುತ
ಬಂದ ಯೇಸು ಮುದದಿ ಪುರಕೆ
2. ಅಂದು ಶಿಶುಗಳ ತಂದ ಅಲ್ಲಿಯ – ಮಾತವೃಂದವನು
ನಿಂದ ಶಿಷ್ಯರ್ ಅಡ್ಡಿಗೈದರ್
3. ತರಲು ಬಿಡಿರಿ ಎನ್ನ ಬಳಿಗೆ – ಅವರ ತಡೆಯದೆ
ಪರಾಮರಾಜ್ಯ ಅವರದೆಂದ
4. ಚಿಕ್ಕ ಮಕ್ಕಳ ಅಕ್ಕರದಿಂ – ಅಪ್ಪಿ ಎದೆಯೊಳು
ಉಕ್ಕಿ ಸುರಿವ ವರವನಿತ್ತ
5. ದೇವರಾಜ್ಯವೇ ಅವರದೆಂದು – ನಯದಿ ನುಡಿದವನೇ
ಭಾವ ಇಮ್ಮೊಳ್ ಮೊಳಿಸು ಯೇಸು
6. ಕ್ರಿಸ್ತ ಸಭೆಯೊಳು ಭಕ್ತಿ ಶಕ್ತಿ – ಪ್ರೀತಿ ಪಡೆಯಲು
ಕ್ರಿಸ್ತಾ ಬಾಲಭಾವ ನೀಡು
7. ಎಲ್ಲಿ ಪ್ರೀತಿ ದೇವಮಹಿಮೆ ದಯೆಯು ತೋರುವವೋ
ಅಲ್ಲಿ ಜಗವು ಹರುಷಮಯವು
Preetiya Saagaraa – Hrudayamadhuraa
1. Sanda Besigeyondu Dinadi – Gaasi Tadeyuta
Banda Yesu Mudadi Purake
2. Andu Shishugala Tanda Alliya – Maatavrundavanu
Ninda Shishyar Addigaidar
3. Taralu Bidiri Enna Balige – Avara Tadeyade
Paramaraajya Avaradenda
4. Chikka Makkala Akkaradim – Appi Edeyolu
Ukki Suriva Varavanitta
5. Devaraajyave Avaradendu – Nayadi Nudidavane
Bhaava Emmol Molisu Yesu
6. Krista Sabheyolu Bhakti Shakti – Preeti Padeyalu
Kristaa Baalabhaava Needu
7. Elli Preeti Devamahime Dayeyu Toruvavo
Alli Jagavu Harushamayavu