ಸ್ತೋತ್ರ 55 Moodana Belakido Moodihudu ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಮೂಡಣ ಬೆಳಕಿದೋ ಮೂಡಿಹುದು
ನಾಡುನಾಡೊಳು ಜ್ಯೋತಿಯ ಬೀರುವ
ಕಾಡುವ ಪಾಪದ ಕಾವಳ ನೀಗಲು
ನಾಡ ಗೋದಲಿಯೊಳು ಯೇಸುವು ಹುಟ್ಟಲು
1. ದೇವದೇವ ತಾ ನಾಕವ ತೊರೆದು
ಜೀವಕಾಂತಿವರವಂ ನೀಡೆ
ಭಾವಿಸೆ ಪಾಮರ ನರ ಕುಲದವರಿಗೆ
ಸಾವ ಭಯಹರಿಸಿ ಹರುಷವ ತೋರೆ
2. ಜ್ಯೋತಿ ಕಾಣಲು ಆಗಸದೊಳಗೆ
ನೀತಿರಾಜನುದಯಂ ತಿಳಿಸೆ
ದೂತರು ಪಾಡಲು ಕುರುಬರ ಗಡಣವು
ಜಾತ ಕುಮಾರನ ಭರದಲಿ ಕಂಡಿತು
3. ಬಾನಿನ ಮಾರ್ಗದಿ ತಾರೆಯು ತೋರಲು
ಜ್ಞಾನದಿಂದಲರಿತು ಮೂವರ್
ಜ್ಞಾನಿಗಳಾಕ್ಷಣ ತ್ವರಿತದಿ ಹೊರಟು
ಮಾನಿತ ಶಿಶುವನ್ನು ಸತ್ರದಿ ಕಂಡರು
4. ಪ್ರೇಮಕಾಂತನ ಬೇಳ್ಪುದು ನರನೇ
ಧಾಮಮಾರ್ಗ ವೆಮಗೆ ತೋರಿ
ಪ್ರೇಮದಿ ನಡೆಯಲು ಉರುತರಬಲವಂ
ಮಾಮಕಭಾವದಿ ಕರುಣಿಪನಾತಂ
5. ಯೇಸು ನಾಮವಂ ಲೋಕದೊಳರುಹಿ
ಈಶಪ್ರೇಮವರಂ ಸಾರಿ
ನಾಶವ ಹೊಂದುವ ನರಕುಲದವರಿಗೆ
ಭಾಸುರದ ಬದುಕ ಹರುಷದಿ ತೋರುವ
Moodana Belakido Moodihudu
Naadunaadolu Jyotiya Beeruva
Kaaduva Paapada Kaavala Neegalu
Naadagodaliyolu Yesuvu Huttalu
1. Devadeva Taa Naakava Toredu
Jeevakaantivaravam Neede
Bhaavise Paamara Nara Kuladavarige
Saava Bhayaharisi Harushava Tore
2. Jyoti Kaanalu Aagasadolage
Neetiraajanudayam Tilise
Dootaru Paadalu Kurubara Gadanavu
Jaata Kumaarana Bharadali Kanditu
3. Baanina Maargadi Taareyu Toralu
Gnaanadindalaritu Moovar
Gnaanigalaakshana Twaritadi Horatu
Maanita Shishuvanu Satradi Kandaru
4. Premakaantana Belpudu Narane
Dhaamamaargavemage Tori
Premadi Nadeyalu Urutarabalavam
Maamakabhaavadi Karunipanaatam
5. Yesu Naamavam Lokadolaruhi
Yeeshapremavaram Saari
Naashava Honduva Narakuladavarige
Bhaasurada Baduka Harushadi Toruva