ಸ್ತೋತ್ರ 220 Aaliseega Tandeye Aaliseega ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಆಲಿಸೀಗ ತಂದೆಯೇ ಆಲಿಸೀಗ
1. ಈಗ ಭೂಮಿ ಬೆಂದು ತಾಮ್ರದ ಹಾಗೆ ಅಂತರಿಕ್ಷ ಗಟ್ಟಿ
ಯಾಗಿ ಕಷ್ಟಪಡುವ ಜನರ ಕೂಗ ಕರುಣದಿಂದ ಕೇಳಿ
2. ಎಲ್ಲಿ ನೋಡಿದಾಗ್ಯೂ ಭೂಮಿಯಲ್ಲಿ ಪೈರು ಬಾಡಿಯೊಣಗಿ
ಹುಲ್ಲು ಸೊರಗಿ ಬೆಂದು ದೇಶದಲ್ಲಿ ಬಾಧೆ ತುಂಬ ಬಂತು
3. ನೀರು ಮೇವು ಕೊರತೆಯಿಂದ ಘೋರಕಷ್ಟಪಟ್ಟ ದನವು
ತೀರ ಬಳಲಿ ಜೀರ್ಣವಾಗಿ ಕ್ರೂರ ಸಾವ ಹೊಂದುವದನು
4. ಹಿಂದೆ ದೊಡ್ಡದಾದ ಮಳೆಯ ತಂದುಕೊಟ್ಟ ಹಾಗೆ ಭುವಿಯ
ನಿಂದು ನೋಡಿ ಮಳೆಯನೊಲಿದು ತಂದು ನಮಗೆ ಪಾಲಿಸೀಗ
5. ಪರಮ ತಂದೆ ನಿನ್ನ ಮುಂದೆ ಕರವ ಜೋಡಿಸಿ ಕೇಳುವಂಥ
ನರರ ಪಾಪವನ್ನು ಕ್ಷಮಿಸಿ ಹರಸಿ ಕಾದು ನಡಿಸುವಂತೆ
…End…
1. Eega Bhoomi Bendu Taamrada Haage Antariksha Gatti
Yaagi Kashtapaduva Janara Kooga Karunadinda Keli
2. Elli Nodidaagyoo Bhoomiyalli Pairu Baadiyonagi
Hullu Soragi Bendu Deshadalli Baadhe Tumba Bantu
4. Neeru Mevu Korateyinda Ghorakashtapatta Danavu
Teerabalali Jeernavaagi Kroora Saava Honduvadanu
5. Hinde Doddadaada Maleya Tandukotta Haage Bhuviya
Nindu Nodi Maleyanolidu Tandu Namage Paaliseega
6. Parama Tande Ninna Munde Karava Jodisi Keluvantha
Narara Paapavannu Kshamisi Harasi Kaadu Nadisuvante
…End…