ಸ್ತೋತ್ರ 145 Yesu Ninnolu Bhadravaade ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಯೇಸು ನಿನ್ನೊಳು ಭದ್ರವಾದೆ – ಎನ್ನ
ಯಾಸರೆ ನಿನ್ನೊಳು ಪಡೆದೆ
ಗಾಸಿ ಹರಿಸುವ ಕೃಪಾಸನವನು ಕಂಡೆ
ಭಾಸುರಾನ್ವಿತವಾದ ಸಾಸಿರ ಭಾಗದಿಂ
1. ಎನ್ನ ರಕ್ಷಕಾ ಭದ್ರವಾದೆ – ನಾನು
ನಿನ್ನ ನೆರಳೊಳು ಸೇರಲಿಂದೆ
ಖಿನ್ನ ಮಾನಸ ನೀಗಿಸೆನ್ನ ಶೋಧನೆ ಹೋಗ
ಲಿನ್ನು ಪಾಪದ ಶಕ್ತಿಯೆನ್ನೊಳು ಕಾಣದೆ
2. ಇನ್ನು ದುಃಖಾದಿಗಳಿಲ್ಲ – ಪಾಪ
ವನ್ನು ನೀಗಿಸ ಸತ್ತೆಯಲ್ಲಾ
ನನ್ನ ಕಣ್ಣೀರೆಲ್ಲವನ್ನು ನಿಲ್ಲಿಸುವಂತ
ಎನ್ನ ತಂದೆಯ ದಿವ್ಯ ಸನ್ನಿಧಿ ಸೇರಿಪ
3. ಸಾಗಿ ನಿನ್ನೆಡೆ ಸೇರ ಬರುವೆ – ತೃಪ್ತಿ
ಗಾಗಿ ಬೇಡುತ ಕಾಯುತಿರುವೆ
ಈಗ ಕಾಣುವ ಮೋಡ ನೀಗಿ ದಾಟಲು ಮುಂದೆ
ಹೋಗಿ ಚಿನ್ನದ ರೇವ ಬೇಗನೆ ಸೇರುತ
Yesu Ninnolu Bhadravaade – Enna
Yaasare Ninnolu Padede
Gaasi Harisuva Krupaasanavanu Kande
Bhaasuraanvithavaada Saasira Bhaagadim
1. Enna Rakshakaa Bhadravaade – Naanu
Ninna Neralolu Seralinde
Khinna Maanasa Neegisenna Shodhane Hoga
Linnu Paapada Shakthiyennolu Kaanade
2. Innu Dukhaadigalilla – Paapa
Vannu Neegisa Sattheyallaa
Nanna Kanneerellavannu Nillisuvantha
Enna Thandeya Divya Sannidhi Seripa
3. Saagi Ninnede Sera Baruve – Trupti
Gaagi Bedutha Kaayuthiruve
Eega Kaanuva Moda Neegi Daatalu Munde
Hogi Chinnada Reva Begane Serutha