ಸ್ತೋತ್ರ 75 Yesu Kartanu Edda, Yesu Kristanu ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಯೇಸು ಕರ್ತನು ಎದ್ದ
ಯೇಸು ಕ್ರಿಸ್ತನು
1. ಸಾಸಿರಾರು ಜನರ ಪಾಪರಾಸಿ ಹರಿಸಿದ
ಗಾಸಿಯೆಲ್ಲವನ್ನು ಬಿಡಿಸಿ ಲೇಸುಮಾಡಿದ
2. ಧರಣಿಗರ್ಭದಲ್ಲಿ ಇಳಿದು ಪರಮ ಕರ್ತನು
ಮರಣ ಕೊಂಡಿಯನ್ನು ಪೂರಾ ಮುರಿದು ಬಿಟ್ಟನು
3. ಗೋರಿಯೊಳಗಿದ್ದು ಕಳೆದ ಮೂರು ದಿನವನು
ಚಾರುಮಹಿಮೆಯಿಂದ ಕೂಡುತೇರಿ ಬಂದನು
4. ದೇವಬಲದಿ ಸಾವ ಕೊಂದು ಜೀವಧರಿಸಿದ
ನಾವು ಸ್ವರ್ಗದಲ್ಲಿ ಸೇರ ತಾವು ಮಾಡಿದ
5. ಗೆದ್ದು ತನ್ನ ಮಾತಿನಂತೆ ಎದ್ದು ತೋರಿದ
ಶುದ್ದರಾಗಿ ಬಾಳಿರೆಂದು ಬುದ್ದಿ ಹೇಳಿದ
6. ಜಯವ ಹೊಂದಿ ತನ್ನ ಜನರ ಭಯವ ಹರಿಸಿದ
ದಯದ ಆತ್ಮವೀವೆನೆಂದು ಅಭಯ ನೀಡಿದ
7. ಹರುಷದಿಂದ ನಂಬುತವನ ಚರಣಕೆರಗುವ
ಶರಣರಾಗಿ ಕರುಣೆಹೊಂದಿ ಪರವ ಪಡೆಯುವ
Yesu Kartanu Edda
Yesu Kristanu
1. Saasiraaru Janara Paaparaasi Harisida
Gaasiyellavannu Bidisi Lesumaadida
2. Dharanigarbhadalli Ilidu Parama Kartanu
Marana Kondiyannu Pooraa Muridu bittanu
3. Goriyolagiddu Kaleda Mooru Dinavanu
Chaarumahimeyinda Kooduteri Bandanu
4. Devabaladi Saava Kondu Jeevadharisida
Naavu Swargadalli Sera Taavu Maadida
5. Geddu Tanna Maatinante Eddu Torida
Shuddaraagi Baalirendu Buddi Helida
6. Jayava Hondi Tanna Janara Bhayava Harisida
Dayada Aatmaveevenendu Abhaya Needida
7. Harushadinda Nambutavana Charanakeraguva
Sharanaraagi Karunehondi Parava Padeyuva