ಸ್ತೋತ್ರ 62 Kristana Nudiya Nee Kel Manave ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಕ್ರಿಸ್ತನ ನುಡಿಯ ನೀ ಕೇಳ್ ಮನವೇ – ಪ್ರಭುಕ್ರಿಸ್ತನ – ಗುರು
ಕ್ರಿಸ್ತನ ನುಡಿಯ ನೀ ಕೇಳ್ ಮನವೇ
1. ಧನ್ಯರು ಆತ್ಮದೊಳ್ ದೀನರಾದವರೆಲ್ಲ
ಮಾನ್ಯರು ಪರಲೋಕರಾಜ್ಯಕ್ಕವರು
ಧನ್ಯರು ದುಖಚಿಂತೆಯೊಳಿಹ ಜನರೆಲ್ಲಾ
ಧನ್ಯರಾದರಣೆಯ ಪೊಂದುವರು
2. ಧನ್ಯರು ಶಾಂತಸ್ವಭಾವವುಳ್ಳವರೆಲ್ಲಾ
ಧನ್ಯರಿಳಿಗೆ ಬಾಧ್ಯರಾಗುವರು
ಧನ್ಯರು ನೀತಿಗೋಸುಗ ಹಸಿದವರೆಲ್ಲಾ
ಧನ್ಯರು ಸಂತುಷ್ಟರಾಗುವರು
3. ಧನ್ಯರು ಕರುಣೆಯ ಭಾವವುಲ್ಲವರೆಲ್ಲಾ
ಧನ್ಯರು ಕರುಣೆಯ ಹೊಂದುವರು
ಧನ್ಯರು ನಿರ್ಮಲ ಚಿತ್ತವುಳ್ಳವರೆಲ್ಲಾ
ಧನ್ಯರು ದೇವನ ಕಾಣುವರು
4. ಧನ್ಯರು ಸಮಾಧಾನಪಡಿಸುವ ಜನರೆಲ್ಲಾ
ಧನ್ಯರು ದೇವರ ಮಕ್ಕಳಾಗುವರು
ಧನ್ಯರು ನೀತಿಗಾಗಿ ಹಿಂಸೆಯ ತಾಳ್ವವರೆಲ್ಲಾ
ಧನ್ಯರು ಸ್ವರ್ಗವ ಸೇರುವರು
5. ಧನ್ಯನಾಗುವೆ ಮನವೇ ನೀನಿಂತು ನಡೆದರೆ
ಧನ್ಯನಾಗುವೆ ಇಹಪರದೊಳಗೆ
ಧನ್ಯಕರ್ತನು ನಿನಗೆ ಕೊನೆಯಲ್ಲಿ ಕೊಡುವನು
ಧನ್ಯರಿಗಾಗಿಟ್ಟ ಭಾಗ್ಯವನ್ನು
Kristana Nudiya Nee Kel Manave – Prabhukristana – Guru
Kristana Nudiya Nee Kel Manave
1. Dhanyaru Aatmadol Deenaraadavarella
Maanyaru Paralokaraajyakkavaru
Dhanyaru Dukhachinteyoliha Janarellaa
Dhanyaraadaraneya Ponduvaru
2. Dhanyaru Shaantaswabhaavavullavarellaa
Dhanyarilige Baadhyaraaguvaru
dhanyaru Neetigosuga Hasidavarellaa
Dhanyaru Santushtaraaguvaru
3. Dhanyaru Karuneya Bhaavavullavarellaa
Dhanyaru Karuneya Honduvaru
Dhanyaru Nirmalachittavullavarellaa
Dhanyaru Devana Kaanuvaru
4. Dhanyaru Samaadhaanapadisuva Janarellaa
Dhanyaru Devara Makkalaaguvaru
Dhanyaru Neetigaagi Himseyataalvavarellaa
Dhanyaru Swargava Seruvaru
5. Dhanyanaaguve Manave Neenintu Nadedare
Dhanyanaaguve Ihaparadolage
Dhanyakartanu Ninage Koneyalli Koduvanu
Dhanyarigaagitta Bhaagyavanu