ಸ್ತೋತ್ರ 6 Paramapoojya Narara Teja ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಪರಮಪೂಜ್ಯ ನರರ ತೇಜ ಧರೆಯ ಕರ್ತನೇ
ಧರೆಯ ರಾಜ್ಯ ಪ್ರಜೆಗಳೆಲ್ಲ ಎರಗಿ ಮಣಿಯಲಿ
1. ನಿರುಪಮಾಂತಕರುಣಾಕರನೆ ಸುರರಿಗಧಿಪನೆ
ಮೆರೆವ ನಿನ್ನ ಮುಖವ ತೋರಿ ಮೆರೆಯಿಸೆಮ್ಮನು
2. ಇಳೆಯ ಸಭೆಯಂ ಬೆಳಕಿನಿಂದ ಪೊಳೆಯಮಾಡಿಸು
ಪ್ರಳಯಪಾಪವಳಿಯೆ ಜಗದಿ ಬೆಳಗಿಸುತ್ತಿರು
3. ಅಘವ ನೀಗಿ ಸೊಗವಾನೀವ ಘನ ಸುರ್ವಾರ್ತೆಯು
ಜಗದ ಕಟ್ಟಕಡೆಯ ವರೆಗೂ ಭರದಿ ಹಬ್ಬಲಿ
4. ಸಕಲಜನರ ನಿಕರವೆಲ್ಲ ಅಕಳಂಕಾ ನಿನ್ನ
ನಿಕಟಭಾವ ಯುಕ್ತರಾಗಿ ಕಾಣ್ಕೆಯೀಯಲಿ
5. ಸುರರ ಲೋಕ ನರರ ಲೋಕ ವೆರಡಲೊಳಗಿಹ
ಸುರರ ನರರ ಹರ್ಷಪ್ರೀತಿ ಬೆರೆತೊಂದಾಗಲಿ
6. ಧರೆಯ ಜನವು ಕರುಣಾಕರನ ಸತತ ನುತಿಸಲಿ
ವರವ ಹೊಂದಿ ಚಿರವು ಬಾಳಿ ಮೆರೆದು ಫಲಿಸಲಿ
Paramapoojya Narara Teja Dhareya Kartane
Dhareya Raajya Prajegalella Eragi Maniyali
1. Nirupamaantakarunaakarane Surarigadhipane
Mereva Ninna Mukhava Tori Mereyisemmanu
2. Ileya Sabheyam Belakininda Poleyamaadisu
Pralayapaapavaliye Jagadi Belagisuttiru
3. Aghava Neegi Sogavaneeva Ghana Survaarteyu
Jagada Kattakadeya Varegoo Bharadi Habbali
4. Sakalajanara Nikaravella Akalankaa Ninna
Nikatabhaava Yuktaraagi Kaankeyeeyali
5. Surara Loka Narara Lokaveradarolagiha
Surara Narara Harshapreeti Beretondaagali
6. Dhareya Janavu Karunaakarana Satata Nutisali
Varava Hondi Chiravu Baali Meredu Phalisali