ಸ್ತೋತ್ರ 58 Naa Paaduve Enna Ee Praanaviruvatanaka ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ನಾ ಪಾಡುವೆ ಎನ್ನ ಈ ಪ್ರಾಣವಿರುವತನಕ
ತಾಪಹರನ ಪ್ರೀತಿ ಈ ಮಹಿಯೊಳಗೆ
ಆ ಪುಣ್ಯಾತ್ಮನು ಎನ್ನ ತಾಪದೇಹವ ತಾಳಿ
ಈ ಪರಿ ಎನಗಾಗಿ ಆಪತ್ತಿಗೀಡಾದ
1. ಪಾಮರರಿಗಾಗಿ ವ್ಯೋಮಾಸನವ ಬಿಟ್ಟ
ಸ್ವಾಮಿಯನಾತನಂ ಪ್ರೇಮಿಸಲಿಲ್ಲ
ಆ ಮಿತ್ರನಾದರೂ ಪ್ರೇಮತೋರುತ ಬಂದ
ಪ್ರೇಮಿಯು ತಾನಂದು ಭೂಮಿಯೊಳ್ ಶ್ರಮಿಸಿದ
2. ಹಲವರಾತನ ದಾರಿಯಲಿ ವಸ್ತುಗಳ ಹರಡಿ
ಬಲವಾಗಿ ಪೊಗಳಿದರ್ ಹೊಸನ್ನ ಎನುತ
ಕೆಲವರು ಬೇಗನೆ ಶಿಲುಬೆಗೆ ಹಾಕೆಂದು
ಅಲೆದು ಕೂಗಾಡುವರೇ ಛಲದಿಂದ ದೇವಾ
3. ಏತಕ್ಕೀ ವೈಷಮ್ಯ ಮಮಕರ್ತ ಗೈದುದೇಂ
ಏತಕೀ ಕ್ರೂರ ನಿಹ್ರೇತುಕ ಕೋಪಂ
ಆತ ಕೈಕಾಲುಗಳಿತ್ತಂಗಹೀನರ್ಗೆ
ಈಶನಂಧರಿಗೆ ಕಣ್ಣಿತ್ತ ಕಾರಣದಿಂ
4. ಧರ್ಮದ ಅರಸನಂ ನಿರ್ಮೂಲಮಾಡಲು
ಕರ್ಮಿಯಾದೊರ್ವನಂ ಬಿಡಿಸಿದರೈ
ದುರ್ಮಾರ್ಗಿಗಳ ಪೊರೆಯ ಮರಣಹೊಂದುವೆನೆಂದು
ಧರ್ಮಪ್ರಭುವು ತಾನೇ ಸಮ್ಮತಿಯಿಂ ಪೋದ
5. ಇರಲೊಂದು ನೆಲೆಯಿಲ್ಲ ಮರೆಯಾಗೆ ಮನೆಯಿಲ್ಲ
ಮರಣಕಾಲದಿ ಸ್ವಂತ ಗೋರಿಯೊಂದಿಲ್ಲ
ಪರಮಾಶ್ಚಯವಿದೀಗ ಪರವೇ ಮನೆಯಾಗಿರಲು
ಪರನೇಕೆ ಸೆರೆಯಾದ ಮೂರು ದಿನ ಗೋರಿಯೊಳ್
6. ಇಂತು ಯೋಚಿಪೆ ನಾನನಂತನ ಸುಚರಿತೆ
ಇಂತಹ ದುಖಪ್ರೇಮವನೆಂದೂ ಕಾಣೆ
ಸಂತೋಷದಿಂದಲೀ ಸತ್ಯಮಿತ್ರನ ಕೀರ್ತಿ
ಇಂತು ಪಾಡುತಲಿರುವೆ ಜೀವಾಂತ್ಯದ ವರೆಗೆ
Naa Paaduve Enna Ee Praanaviruvatanaka
Taapaharana Preeti Ee Mahiyolage
Aa Punyaatmanu Enna Taapadehava Taali
Ee Pari Enagaagi Aapattigeedaada
1. Paamararigaagi Vyomaasanava Bitta
Swaamiyanaatanam Premisalilla
Aa Mitranaadaroo Prematoruta Banda
Premiyu Taanandu Bhoomiyol Shramisida
2. Halavaraatana Daariyali Vastugala Haradi
Balavaagi Pogalidar Hosanna Enuta
Kelavaru Begane Shilubege Haakendu
Aledu Koogaaduvare Chaladinda Devaa
3. Etakkee Vaishamya Mamakarta Gaidudem
Etakee Kroora Nihretuka Kopam
Aata Kaikaalugalittangaheenarge
Eeshanandharige Kannitta Kaaranadim
4. Dharmada Arasanam Nirmoolamaadalu
Karmiyaadorvanam Bidisidarai
Durmaargigala Poreya Maranahonduvenendu
Dharmaprabhuvu Taane Sammatiyim Poda
5. Iralondu Neleyilla Mareyaage Maneyilla
Maranakaaladi Swanta Goriyondilla
Paramaashchayavideega Parave Maneyaagiralu
Paraneke Sereyaada Mooru Dina Goriyol
6. Intu Yochipe Naananantana Sucharite
Intaha Dukhapremavanendoo Kaane
Santoshadindalee Satyamitrana Keerti
Intu Paadutaliruve Jeevaantyada Varege