ಸ್ತೋತ್ರ 5 Deva Shrushteesha Satprabhuve ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ದೇವ ಶ್ರುಷ್ಟೀಶ ಸತ್ಪ್ರಭುವೆ – ಎಲ್ಲ
ಜೀವ ಚಲನೆಗಳ ನೆಲೆಯೇ
ಈ ವಿಶ್ವದೊಳು ನವಜೀವ ತರುವ ನೀನೆ
ಭಾವಿಸೆ ದೀನರಾಪದ್ಬಾಂಧವನು ನೀನೆ
1. ಕಾಲಾತೀತ ನಿತ್ಯ ಪುರುಷಾ – ನಿನ್ನ
ಪಾಲನೆಯೇ ನಮ್ಮ ಹರುಷ
ಮೇಲಾದ ಶಾಂತಿಯ ಭದ್ರಸ್ತಾನವು ನೀನೆ
ಕಾಲಕಾಲಕೆ ಭಕ್ತಾವಳಿಗಾಶ್ರಯನು ನೀನೆ
2. ಸರ್ವಸೃಷ್ಟಿಗೆ ಹೊಸ ತ್ರಾಣ – ವಿಟ್ಟು
ನಿರ್ವಹಿಸುವ ಜೀವದಾತ್ಮಾ
ಸರ್ವೋತ್ತಮ ಮಾರ್ಗದೊಳು ನೀ ಪೋಗುವೆ ಮುಂದೆ
ಸರ್ವೋತ್ಸಾಹದಿಂದೋಡುವೆವು ನಿನ್ನ ಹಿಂದೆ
3. ಹೊಳೆವ ನಿನ್ನಗ್ನಿಯೊಳ್ ನಾವು – ನಿತ್ಯ
ಬೆಳಗುತ ಪೂತರಾಗುವೆವು
ಬಲದಿಂದ ಬಲಕ್ಕೆ ಮುಂದರಿಯುತ ಪೋಪೆವು
ಇಳೆಯೊಳುತ್ತಮ ಜೀವೋನ್ನತಿಗೈಯುತ್ತಿರುವೆವು
4. ಭಾವಭೀತಿಗಳ ಹಿಂದೆ ಬಿಟ್ಟು – ಮುಂದೆ
ನವಜೀವಕಾಂತಿಯ ತೊಟ್ಟು
ನವಜೀವದನುಭವಗಳ ಕಂಡುತ್ಸಾಹದಿ
ನವಜಯೋತ್ಸಾಹವ ದಿವ್ಯ ಮಾರ್ಗದೊಳ್ ನಡೆವ
5. ಚಲಿಸುತ ನಿನಗಾಗಿ ದೇವಾ – ನಿನ್ನೊಳ್
ಸಲೆ ವಿಷಮಿಸಿ ಬಾಳ್ವೆವೆಂದೂ
ನೆಲೆಯದಾಗಿರುವೆ ನೀನೆಮಗೆ ನಿರಂತರ
ಬಲರೂಪ ನೀನಿರೆ ಏಮಗಾವ ಕೊರತೆಯು
Deva Shrushteesha Satprabhuve – Ella
Jeeva Chalanegala Neleye
Ee Vishwadolu Navajeeva Taruva Neene
Bhaavise Deenaraapadbaandhavanu Neene
1. Kaalaateeta Nitya Purushaa – Ninna
Paalaneye Namma Harusha
Melaada Shaantiya Bhadrastaanavu Neene
Kaalakaalake Bhaktaavaligaashrayanu Neene
2. Sarvasrushtige Hosa Traana – Vittu
Nirvahisuva Jeevadaatmaa
Sarvottama Maargadolu Nee Poguve Munde
Sarvotsaahadindoduvevu Ninna Hinde
3. Holeva Ninnagniyol Naavu – Nitya
Belaguta Pootaraaguvevu
Baladinda Balakke Mundariyuta Popevu
Ileyoluttama Jeevonnati gaiyuttiruvevu
4. Bhavabheetigala Hinde Bittu – Munde
Navajeevakaantiya Tottu
Navajeevadanubhavagala Kandutsaahadi
Navajayotsaahava Diviya Maargadol Nadeva
5. Chalisuta Ninagaagi Devaa – Ninnol
Sale Vishamisi Baalvevendoo
Neleyadaagiruve Neenemage Nirantara
Balaroopa Neenire Emagaava Korateyu