ಸ್ತೋತ್ರ 45 Laalisu Manave Ahaa Laalisu Manave ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಲಾಲಿಸು ಮನವೇ ಆಹಾ ಲಾಲಿಸು ಮನವೇ ಲಾಲಿಸು ಮನವೇ
ಲಾಲಿಸು ಪರಮಪ್ರೀತಿಯ ಮೂಲವ ಲಾಲಿಸು ಮನವೇ
1. ಹೋಲಿಸಕೂಡದ ಆಹಾ ಅತ್ಯಮೂಲ್ಯ ಯೆಹೋವನು
ಶೀಲಳಾದ ಕನ್ನಿಕೆಯಲ್ಲಿ ಹುಟ್ಟಿ ಬಾಲಕನಾದನು
2. ಆದಿ ಮಧ್ಯಾಂತಗಳ್ ಆಹಾ ಭಿನ್ನಭೇದವಿಲ್ಲದವ
ಯೂದಾಯ ಬೆತ್ಲೆಹೇಮ್ , ಛತ್ರದೊಳ್ ಶಿಶುವಾದದ್ದೆನನುವೋ
3. ಸುಂದರಲೋಕದ ಆಹಾ ದಿವ್ಯ ತಂದೆಯ ಪುತ್ರನು
ಚಿಂದಿಬಟ್ಟೆಯೂ ಮಂದೆಗೋದಲಿಯೂ ತಂದ ಭಾಗ್ಯಗಳೋ
4. ಮೂರು ಲೋಕಂಗಳ ಆಹಾ ಸರ್ವಧಾರನಾದವನು
ಊರಲ್ಲಿ ಸೇರಿ ಹುಟ್ಟಲು ಮನೆಯಿಲ್ಲ ಆರ ನೇಮಕವೋ
5. ಹಾಡುತ್ತಾ ದೂತರು ಆಹಾ ಸಾರಿ ಹಾಡಿದ ಸುದ್ದಿಯ
ಕೂಡಿಕೇಳ ಬರುವವರಿಲ್ಲವೇ ಕಾಡುಕುರುಬರೇನೋ
6. ಏನತಿಯವೋ ಆಹಾ ಮತ್ತು ಏನು ಕಾರುಣ್ಯವೋ
ತಾನೇ ತನ್ನ ಬಲಿಯರ್ಪಿಸುವಂತೆ ಮಾನವನಾದನು
7. ಯೇಸು ಮೆಸ್ಸೀಯನೇ ಆಹಾ ಎನ್ನ ಆಶಯ ನಾಯಕನು
ದಾಸನುದ್ದಾರಕ್ಕಾಗಿ ಜನಿಸಿದುಲ್ಲಾಸದಾಯಕನು
Laalisu Manave Ahaa Laalisu Manave Laalisu Manave
Laalisu Paramapreetiya Moolava Laalisu Manave
1. Holisakoodada Ahaa Atyamoolya Yehovanu
Sheelalaada Kannikeyalli Hutti Baalakanaadanu
2. Aadi Madhyaantagal Ahaa Bhinnabhedavilladava
Yoodaya Betlehem, Chatradol Shishuvaadaddenanuvo
3. Sundaralokada Ahaa Divya Tandeya Putranu
Chindibatteyoo Mandegodaliyoo Tanda Bhaagyagalo
4. Mooru Lokangala Ahaa Sarvadhaaranaadavanu
Ooralli Seri Huttalu Maneyilla Aara Nemakavo
5. Haaduttaa Dootaru Ahaa Saari Haadida Suddiya
Koodikela Baruvavarillave Kaadukurubareno
6. Enatiyavo Ahaa Mattu Enu Kaarunyavo
Taane Tanna Baliyarpisuvante Maanavanaadanu
7. Yesu Messeeyane Ahaa Enna Aashaya Naayakanu
Daasanuddaarakkagi Janisidullasadaayakanu
8. Ileyali Sakalarige Swaamisadgunava
Tilisaludbhavisidi Divya Lakshanava
9. Eshtu Premava Torde Paramasadguruve
Nishteyindali Ninna Nutisuvenu Prabhuve