ಸ್ತೋತ್ರ 4 Stutisu Nee Ennaatmave Paralokadarasana ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಸ್ತುತಿಸು ನೀ ಎನ್ನಾತ್ಮವೇ ಪರಲೋಕದರಸನ ನಾಮವ
ಸ್ತುತಿಸು ಪರಮಾನಂದದಿಂದ ನೆನೆದು ಆತನ ಚರಣವ
1. ಕ್ಷಮೆಯ ಪಾಪವಿಮೋಚನೆಯ ಸುಕ್ಷೇಮವ ರಕ್ಷಣ್ಯವ
ಅಮಿತ ಪ್ರೇಮದೊಳಿತ್ತನಾಪ್ರಭು ನಮಿಸು ಆತನ ಚರಣವ
2. ಹಿಂದೆ ನಮ್ಮಯ ಪಿತೃಗಳ ಕಷ್ಟಾಬ್ಡಿಯಿಂದಲಿ ತರಿಸಿದ
ಇಂದು ನಮ್ಮನ್ನು ತಾಳ್ಮೆಯಿಂದಲೆ ಸಲಹುತಾಶೀರ್ವದಿಸುವ
3. ನಂಬಿಗಸ್ತನು ತಂದೆ ನಮ್ಮಯ ದುರ್ಬಲವ ತಾನರಿವನೈ
ನಂಬಿದವರ ಸ್ವಹಸ್ತದಲ್ಲಿ ತಾನೆತ್ತಿ ಕಾವನು ವೈರಿಯಿಂ
4. ನಿತ್ಯವಾತನ ನೆರೆಯೊಳಿರುವ ದೂತರೆ ಕೊಂಡಾಡಿರಿ
ನಿತ್ಯವಾತನ ಮುಖವನೋಳ್ಪ ಅಮರರೇ ಕೊಂಡಾಡಿರಿ
5. ಸರ್ವ ತಾರಚಂದ್ರ ಸೂರ್ಯರೆ ಶಿರವ ಬಾಗಿರಿ ಕರ್ತಗೆ
ಉರ್ವಿಜನರೆ ಸ್ವರ್ಗದವರೇ ಪಾಡಿರಿ ಧ್ರುತಿಯಿಂದಲೇ
Stutisu Nee Ennaatmave Paralokadarasana Naamava
Stutisu Paramaanandadinda Nenedu Aatana Charanava
1. Kshameya Paapavimochaneya Sukshemava Rakshanyava
Amita Premadolittanaaprabhu Namisu Aatana Charanava
2. Hinde Nammaya Pitarugala Kashtaabdiyindali Tarisida
Indu Nammannu Taalmeindale Salahutaasheervadisuva
3. Nambigastanu Tande Nammaya Durbalava Taanarivanai
Nambidavara Swahastadalli Taanetti Kaavanu Vairiyim
4. Nityavaatana Nereyoliruva Dootare Kondaadiri
Nityavaatana Mukhavanolpa Amarare Kondaadiri
5. Sarva Taarachanda Sooryare Shirava Baagiri Kartage
Urvijanare Swargadavare Paadiri Dhrutiyindale