ಸ್ತೋತ್ರ 38 Yesu Kristana Poornaneeti ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಯೇಸು ಕ್ರಿಸ್ತನ ಪೂರ್ಣನೀತಿ – ಆತ
ಗಾಗಿ ತಪ್ಪಿಸಿ ಭೀತಿಹರಿಸುವ ರೀತಿ
1. ಎನ್ನೊಳು ಪುಣ್ಯಗಳಿಲ್ಲ ನೀತಿಯಿಲ್ಲ – ನೀತಿ
ಯನ್ನೆನಗೀಗಲು ಹೊದ್ದಿಪನಲ್ಲಾ
2. ಪರಲೋಕನೀತಿಯ ತಂದು ಆತ ತಂದು – ತನ್ನ
ಶರಣರ ಪಾಪವ ಹರಿಸಿದ ಬಂದು
3. ದೇವರ ನೀತಿಯ ಹೊಂದಿ ನಾನು ಹೊಂದಿ – ನಿತ್ಯ
ಜೀವವ ಹೊಂದುವೆನಾತನ ದಯದಿ
4. ತಂದೆಯ ಸನ್ನಿಧಿ ಸೇರಿ ಆತ ಸೇರಿ – ತಂದೆ
ಸುಂದರಲೋಕವ ಕೊಡುವುಪಕಾರಿ
5. ಸಾವಿನ ಕೊಂಡಿಯ ಮುರಿದು ನಾನು ಮುರಿದು – ನಿತ್ಯ
ಜೀವಕಿರೀಟವ ಪರದೊಳು ಪಡೆದು
Yesu Kristana Poornaneeti – Aata
Gaagi Tappisi Bheetiharisuva Reeti
1. Ennolu Punyagalilla Neetiyilla – Neeti
Yannenageegalu Hoddipanallaa
2. Paralokaneetiya Tandu Aata Tandu – Tanna
Sharanara Paapava Harisida Bandu
3. Devara Neetiya Hondi Naanu Hondi – Nitya
Jeevava Honduvenaatana Dayadi
4. Tandeya Sannidhi Seri Aata Seri – Tande
Sundaralokava Koduvupakaari
5. Saavina Kondiya Muridu Naanu Muridu – Nitya
Jeevakireetava Paradolu Padedu