ಸ್ತೋತ್ರ 29 Bhajisi Nutisiro Punyaakarana ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಭಜಿಸಿ ನುತಿಸಿರೋ ಪುಣ್ಯಾಕರನ – ಕನ್ಯಾಜ ಕ್ರಿಸ್ತನ
ಭಜಿಸಿ ನುತಿಸಿರೋ ಪುಣ್ಯಾಕರನ
ಭಜಿಸಿ ನುತಿಸಿ ಪುಣ್ಯಾಕರ ಕ್ರಿಸ್ತನ
ತ್ಯಜಿಸಿ ಜ್ಯಜಿಸಿ ದುರ್ಮಾರ್ಗಗಳೆಲ್ಲವ
1. ಕನ್ಯೆಯ ಗರ್ಭದಿ ಜನಿಸಿದವನ – ತ್ರಿಲೋಕಗಳಿಗೂ
ಪುಣ್ಯಪ್ರಭಾವದ ಸುಂದರನ
ಅನ್ಯ ಜನರಿಗೆಲ್ಲಾ ಅದ್ಭುತ ತೋರುತೆ
ಧನ್ಯರ ಮಾಡಿದ ದಯದ ಸಂಪನ್ನನ
2. ಪ್ರಾಣದಾನವ ಗೈದ ವರದನ – ತೃತೀಯ ದಿನದೊಳು
ತ್ರಾಣದಿ ಪುನರುಥ್ಹಾನವಾದನ
ತಾಕಕ್ಕೈದಿ ತಾಂ ತಂದೆಯ ಬಳಿಯಲಿ
ಮಾನದಿ ಪ್ರಾರ್ಥನೆ ಮಾಳ್ಪ ಸಂಪೂರ್ಣನ
3. ಭೃತರ ಪಾಲಿಪ ಕರುಣಾಕರನ – ಮೂರು ಮಂಡಲಗಳ
ಪ್ರತ್ಯವಾಯದ ಸಂಹಾರಕನ
ನಿತ್ಯವೂ ದಾಸನ ಚಿತ್ತದೊಳ್ ಭಾವಿಸಿ
ಸತ್ಯದಿ ಪೋಷಿಪ ದೇವಾನಂದನನಂ
Bhajisi Nutisiro Punyaakarana- Kanyaaja Kristana
Bhajisi Nutisiro Punyaakarana
Bhajisi Nutisi Punyaakara Kristana
Tyajisi Jyajisi Durmaargagalellava
1. Kanyeya Garbhadi Janisidavana- Trilokagaligoo
Punyaprabhaavada Sundarana
Anya Janarigellaa Adbhuta Torute
Dhanyara Maadida Dayada Sampannana
2. Praanadaanava Gaida Varadana- Truteeya dinadolu
Traanadi Punaruthaanavaadana
Taakakkaidi Taam Tandeya Baliyali
Maanadi Praarthane Maalpa Sampoornana
3. Bhrutara Paalipa Karunaakarana – Mooru Mandalagala
Pratyavaayada Samhaarakana
Nityavoo Daasana Chittadol Bhaavisi
Satyadi Poshipa Devaanandananam