ಸ್ತೋತ್ರ 230 Mangala Mangala Shubha Shubha ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಮಂಗಳ ಮಂಗಳ ಶುಭ ಶುಭ
ಮಂಗಳ ಮಂಗಳ ಜಯ ಜಯ
ಮಂಗಳ ಮಂಗಳ ಸದಾನಂದ
1. ತುಂಗದಿವ್ಯಲೋಕಂಗಳ ಸರ್ವ ಗ
ಣoಗಳ ಪರಸಂಘವಾಳುವ
ಹಿಂಗದ ದಯೆಯಿಂದ ಸಂಗತನಾಗಿ
ಪೊಂಗಿದ ನಿರ್ಮಲ ಪುಂಗವ ತಂದೆಗೆ
2. ಧರಣೀತಲದೊಳು ಗುರುತರಕರುಣದಿ
ನರದೇಹದವತಾರವೆತ್ತಿ ತನ್ನ
ಹರಣವ ಬಿಟ್ಟು ಮೂರನೇ ದಿನವೆದ್ದು
ಇರದೇರಿ ಪಿತನೆಡೆಗೈದಿದ ಕ್ರಿಸ್ತಗೆ
3. ನಿತ್ಯನೇಸು ವಾಗ್ದತ್ತ ಮಾಡಿದ
ಸತ್ಯದಿಂದ ಸುಪವಿತ್ರಗೈಯುವ
ನಿತ್ಯವೂ ನಿಜಭಕ್ತರ ಕಾಯುವ
ಅತ್ಯುತ್ತಮನಾದ ಸತ್ಯದ ಆತ್ಮಗೆ
4. ತಂದೆಯು ಪ್ರೀತಿಯಿಂದಲೆವಂಗಿಹ
ಮಂದಮತಿನಿರ್ಬಂಧಗಳನ್ನೆಲ್ಲಾ
ಸಂಧಿಸಿ ಸತ್ಯದಿಂದ ಬಿಡಿಸಲು
ತಂದ ಜ್ಞಾನಪ್ರದಸುಂದರವೇದಕ್ಕೆ
5. ಮೇದಿನಿಯೊಳು ಮೋದಕರ್ತನು
ವೇದಸತ್ಯದ ಬೋಧನೆಯಿಂದ
ಲಾದು ಕೃಪೆಯಿಂ ಕಾದುಬರುವಂಥ
ಬೋಧಕರಿಗೂ ಸಾಧುಭಕ್ತರಿಗೂ
Mangala Mangala Shubha Shubha
Mangala Mangala Jaya Jaya
Mangala Mangala Sadaananda
1. Tungadivyalokangala Sarva Ga
Nangala Parasangha vaaluva
Hingada Dayeyinda Sangatanaagi
Pongida Nirmala Pungava Tandege
2. Dharaneetaladolu Gurutarakarunadi
Naradehadava taaravetti Tanna
Haranava Bittu Moorane Dinaveddu
Iraderi Pitanedegaidida Kristage
3. Nityanesu Vaagdatta maadida
Satyadinda Supavitragaiyuva
Nityavoo Nijabhaktara Kaayuva
Atyuttamanaada Satyada Aatmage
4. Tandeya Preetiyindale vangiha
Mandamati nirbhandhagalannellaa
Sandhisi Satyadinda Bidisalu
Tanda Gnaanaprada sundaravedakke
5. Mediniyolu Modakartanu
Vedasatyada Bodhaneyinda
Laadu Krupeyim Kaadubaruvantha
Bodhakarigoo Saadhubhaktarigoo