ಸ್ತೋತ್ರ 227 Mangala Jaya Jaya Devarige ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಮಂಗಳ ಜಯ ಜಯ ದೇವರಿಗೆ ಶುಭಮಂಗಳ ನಿಜ
ಮಂಗಳ ಕರುಣಾತ್ರಯೈಕನಿಗೆ
1. ಆದಿಯೊಳಖಿಲವು ಸಾದಿತವಾಗಿರೆ
ನಾದದಿ ನಿರ್ಮಿಸಿ ಮೇದಿನಿಯಂ
ಭೇದವಿಲ್ಲದೆ ಎಮ್ಮ ಕಾದು ದಿವ್ಯಾಶೀ
ರ್ವಾದಗಳೀಯುವಂಥಾಧೀಶಗೆ
2. ಲೋಕದೊಳಿರುವಂಥ ಕಾಕುಜನರ ಮೇಲೆ
ಸಾಕಲ್ಯ ಪ್ರೇಮದಿಂದೇಕ ಕರ್ತ
ನಾಕದಬಾಗಿಲಂ ನೂಕುತೆಲ್ಲವ ತೆರೆದು
ಶೋಕವ ಬಿಡಿಸಿದ ಲೋಕೇಶಗೆ
3. ಎರಗುವ ದಾಸರ ಮುರಿದ ಸ್ವಾoತಗಳೊಳು
ಕೊರತೆಗಳೆಲ್ಲವ ಪರಿಹರಿಸಿ
ಪರಿಪೂರ್ಣಪ್ರೇಮದಿ ಧರೆಯಲ್ಲಿ ನಡಿಸುತ
ಪರದೊಳು ಸೇರಿಪ ವರದಾತ್ಮಗೆ
4. ದಯೆಗೆಡೆಯಾದ ವಿಜಯನಾಥನಾಜ್ಞೆಯ
ನಯದಿಂದ ಸಕಲರಿಗೆ ದಯಮಾಡುತ
ಭಯಪಾಪಗಳಿಗೆ ಆಶ್ರಯವಾದ ಹೃದಯಕ್ಕೆ
ಭಯವ ನೀಡುವ ನಿರ್ಲಯವಾರ್ತೆಗೆ
5. ನರರನ್ನು ಸೃಜಿಸಿದ ನಿರುಪಮಸ್ವಾಮಿಗೆ
ನರಕದಿಂದ ಬಿಡಿಸುವ ಗುರುರಾಯಗೆ
ದುರಿತವ ದಹಿಸುವ ಪರಿಶುದ್ದಾತ್ಮನಿಗೆ
ಸರುವರಂ ಪಾಲಿಪ ಪರಮೇಶಗೆ
Mangala Jaya Jaya Devarige Shubhamangala Nija
Mangala Karunaatrayaikanige
1. Aadiyolakhilavu Saaditavaagire
Naadadi Nirmisi Mediniyam
Bhedavillade Emma Kaadu Divyaashee
Rvaadagaleeyu vanthaadeeshage
2. Lokadoliruvantha Kaakujanara Mele
Saakalya Premadindeka Karta
Naakadabaagilam Nookutellava Teredu
Shokava Bidisida Lokeshage
3. Eraguva Daasara Murida Swaantagalolu
Korategalellava Pariharisi
Paripoornapremadi Dhareyalli Nadisuta
Paradolu Seripa Varadaatmage
4. Dayegede Yaada Vijayanaatha naagneya
Nayadinda Sakalarige Dayamaaduta
Bhayapaapagalige Aashrayavaada Hrudayakke
Bhayava Needuva Nirlayavaartege
5. Nararannu Srujisida Nirupama swaamige
Narakadinda Bidisuva Gururaayage
Duritava Dahisuva Parishuddaatmanige
Saruvaram Paalipa Parameshage