ಸ್ತೋತ್ರ 203 Baalakara Praarthane Yannaalaisuva Prabhuve ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಬಾಲಕರ ಪ್ರಾರ್ಥನೆ ಯನ್ನಾಲೈಸುವ ಪ್ರಭುವೇ
ಮೇಲಿನಿಂದ ಲಾತ್ಮವರವ ಪಾಲಿಸು ನಮ್ಮೇಸುವೇ
1. ಬಾಲರೆಲ್ಲರು ಬರಲಿ ಎಂದು ಹೇಳಿದ ನಿನ್ನ ವಾಕ್ಯವ
ಕೇಳಿ ನಂಬಿ ಸೇರಿದೆವು ಬಾಳವೀಯು ಭಾಗ್ಯವ
2. ಮಂದಬುದ್ಧಿಯಿಂದ ನಾವು ನಿಂದೆಗೊಳಗಾದೆವು
ಇಂದು ನಿನ್ನ ಕೃಪೆಯನೆಮಗೆ ತಂದರೆ ಪ್ರಸಾದವು
3. ಓದುವ ಸದ್ವಾಕ್ಯಗಳ ಕಾದು ನಡೆಯ ಮಾಡಿಸು
ಬೋಧಕರ ಬೋಧೆಯಂತೆ ಸಾಧಿಸ ಪ್ರೇರೇಪಿಸು
4. ಇಷ್ಟು ಕಾಲ ಮಾರ್ಗತಪ್ಪಿ ಭ್ರಷ್ಟರಾದೆವಾದರೂ
ಇಷ್ಟದಿಂದ ರಕ್ಷಿಸೆಮ್ಮ ದೃಷ್ಟಿಸಿ ಹೇಗಾದರೂ
5. ನಿನ್ನ ದಿವ್ಯ ಪುಣ್ಯದಿಂದ ಧನ್ಯರಾಗಿ ಬಾಳಿಸು
ಇನ್ನು ಮೇಲೆ ನಿತ್ಯದಲ್ಲಿ ನಿನ್ನೊಳೆಮ್ಮ ಬೆಳೆಯಿಸು
Baalakara Praarthane Yannaalaisuva Prabhuve
Melininda laatmavarava Paalisu Nammesuve
1. Baalarellaru Barali Endu Helida Ninna Vaakyava
Keli Nambi Seridevu Baalaveeyu Bhaagyava
2. Mandabuddiyinda Naavu Nindegolagaadevu
Indu Ninna Krupeyanemage Tandare Prasaadavu
3. Oduva Sadvaakyagala Kaadu Nadeya Maadisu
Bodhakara Bodheyante Saadhisa Prerepisu
4. Ishtu Kaala Maargatappi Brashtaraadevaadaroo
Ishtadinda Rakshisemma Drushtisi Hegaadaroo
5. Ninna Divya Punyadinda Dhanyaraagi Baalisu
Innu Mele Nityadalli Ninnolemma Beleyisu