ಸ್ತೋತ್ರ 201 Laali Yesuve Laali Laali Jagadeeshaa ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಲಾಲಿ ಯೇಸುವೇ ಲಾಲಿ ಲಾಲಿ ಜಗದೀಶಾ
ಲಾಲಿ ಕ್ರಿಸ್ತನೇ ಲಾಲಿ ಲಾಲಿ ಸರ್ವೇಶಾ
1. ದುರುಳರಂ ಪಾಲಿಸೆ ಘನಭಾಗ್ಯ ತೊರೆದೆ
ಧರೆಯಲ್ಲಿ ಜನಿಸಿ ಮಾನವನಾಗಿ ಮೆರೆದೆ
2. ಪಾವನಾತ್ಮನ ಬಲದಿ ಕನ್ಯೆಯಲಿ ಹುಟ್ಟಿ
ಕಾವಳವ ಹರಿಸಿ ಸುಕಾಂತಿಯನ್ನು ಕೊಟ್ಟಿ
3. ಜೀವನಾಯಕನಿಂದು ಉದಯಿಸಿದನೆಂದು
ದೇವದೂತರು ಸಾರಿ ಪೇಳಿದರು ಅಂದು
4. ಲೋಕಪತಿ ಪ್ರಭವಿಸಿದನೆಂದು ಗ್ರಹಿಸಿದರು
ಆಕಾಶದೊಳು ತಾರೆಯಿಂದ ಪಂಡಿತರು
5. ಚಿನ್ನಧೂಪವ ಬೋಳಗಳನರ್ಪಿಸಿದರು
ಭಿನ್ನವಿಲ್ಲದೆ ಸೇವೆಯನು ಸಲ್ಲಿಸಿದರು
6. ನರರು ಮೀರಿದ ಅರಸರರಸನಪ್ಪಣೆಯ
ನೆರವೇರಿಸಲು ಬಂದು ನೀಡಿದೆ ಕೃಪೆಯ
7. ಶಿಕ್ಷೆಗೊಳಗಾದೆಮ್ಮ ಕಷ್ಟಗಳ ಬಿಡಿಸಿ
ರಕ್ಷಿಸಲೈದಿದೆ ನೀ ನರಭಾವ ನಹಿಸಿ
8. ಇಳೆಯಲಿ ಸಕಲರಿಗೆ ಸ್ವಾಮಿಸದ್ಗುಣವ
ತಿಳಿಸಲುದ್ಭವಿಸಿದಿ ದಿವ್ಯ ಲಕ್ಷಣವ
9. ಎಷ್ಟು ಪ್ರೇಮವ ತೋರ್ದೇ ಪರಮಸದ್ಗುರುವೇ
ನಿಷ್ಠೆಯಿಂದಲಿ ನಿನ್ನ ನುತಿಸುವೆನು ಪ್ರಭುವೇ
Laali Yesuve Laali Laali Jagadeeshaa
Laali Kristane Laali Laali Sarveshaa
1. Durularam Paalise Ghanabhaagya Torede
Dhareyalli Janisi Maanavanaagi Merede
2. Paavanaatmana Baladi Kanyeyali Hutti
Kaavalava Harisi Sukaantiyannu Kotti
3. Jeevanaayakanindu Udayisidanendu
Devadootaru Saari Pelidaru Andu
4. Lokapati Prabhavisidanendu Grahisidaru
Aakaashadolu Taareyinda Panditaru
5. Chinnadhoopava Bolagalanarpisidaru
Bhinnavillade Seveyanu Sallisidaru
6. Nararu Meerida Arasararasanappaneya
Neraverisalu Bandu Needide Krupeya
7. Shikshegolagaademma Kashtagala Bidisi
Rakshisalaidide Nee Narabhaava Nahisi
8. Ileyali Sakalarige Swaamisadgunava
Tilisaludbhavisidi Divya Lakshanava
9. Eshtu Premava Torde Paramasadguruve
Nishteyindali Ninna Nutisuvenu Prabhuve