ಸ್ತೋತ್ರ 197 Eshtu Subhaagyagalu Ive ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಎಷ್ಟು ಸುಭಾಗ್ಯಗಳು ಇವೆ ಶಿಷ್ಯರಿಗೆ ಪರದೊಳು
ಕಷ್ಟ ಸಹಿಸದೆ ವಿಶಿಷ್ಟಸುಖಾದಿಗ
ಳಿಷ್ಟರು ಹೊಂದುವರೈ
1. ಹಾಡುತಲ್ಲಿಯದನು ಕೊಂಡಾಡುತ ಸುಖವನ್ನು
ಓಡುತ ಅಲ್ಲಿಗೆ ಕೂಡುತ ಹರುಷವ
ನೋಡುವದಾಗುವದೈ
2. ಶೋಧನೆಯೆಲ್ಲವನು ನಮ್ಮ ಬಾಧೆಗಳೆಲ್ಲವನು
ಸಾಧು ಮಾಡುವಂಥ ಬೊಧಕ ಕ್ರಿಸ್ತನ
ಮೋದದಿ ಈಕ್ಷಿಪರೈ
3. ಶುದ್ಧತೆ ಪಡೆದವರು ಅತಿಸಿದ್ದಿಯ ಹೊಂದುವರು
ವೃದ್ದರು ಬಾಲರು ಶುದ್ಧ ಹೃದಯದಿಂ
ಬದ್ಧರಾಗಿರುತಿಹರೈ
4. ಸ್ವಾಮಿಯ ರಾಜ್ಯದೊಳು ಬಲು ಕಾಮಿತಕಾರ್ಯದೊಳು
ಪ್ರೇಮವ ತೋರಿಪ ಕ್ಷೇಮವನಾಂತ ಸು
ಧಾಮವ ನೀಕ್ಷಿಪೆವೈ
5. ತಂದೆಯೇ ಅಂತ್ಯದೊಳು ಆ ಸುಂದರ ಲೋಕದೊಳು
ಕುಂದದ ಪ್ರೇಮದಿ ಕಂದನ ಆತ್ಮವ
ತಂದು ಸುಖವ ಪಡಿಸೈ
Eshtu Subhaagyagalu Ive Shishyarige Paradolu
Kashta Sahisade Vishishtasukhaadiga
Lishtaru Honduvarai
1. Haadutalliyadanu Kondaaduta Sukhavannu
Oduta Allige Kooduta Harushava
Noduvadaaguvadai
2. Shodhaneyellavanu Namma Baadhegalellavanu
Saadhu Maaduvantha Bodhaka Kristana
Modadi Eekshiparai
3. Shuddate Padedavaru Atisiddiya Honduvaru
Vruddaru Baalaru Shudda Hrudayadim
Baddaraagirutiharai
4. Swaamiya Raajyadolu Balu Kaamita Kaaryadolu
Premava Toripa Kshemavanaanta Su
Dhaamava Neekshipevai
5. Tandeye Antyadolu Aa Sundara Lokadolu
Kundada Premadi Kandana Aatmava
Tandu Sukhava Padisai