ಸ್ತೋತ್ರ 186 Paramakartana Marnavannu Smarisuteega Bhaktare ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಪರಮಕರ್ತನ ಮರಣವನ್ನು ಸ್ಮರಿಸುತೀಗ ಭಕ್ತರೇ
ಕರುಣಾಭರಿತಗುರುವನ್ನೀಗ ದರುಶಿಸೋಣ ಭಕ್ತರೇ
1. ಎನ್ನ ಭಾರವನ್ನೆಲ್ಲಾ ನಿನ್ನ ಮೇಲೆ ಹೊರಿಸುವೆ ಕರ್ತನೇ
ಉನ್ನತೋನ್ನತ ವಿಶಯಗಳನು ಮುಟ್ಟಿ ಗ್ರಹಿಸುವೆ ಕರ್ತನೇ
2. ನಿತ್ಯವಾದ ಆಶೀರ್ವಾದಗತ್ಯವಾಗಿ ಪಡೆಯುವೆ
ಸತ್ಯವಾದ ದೈವಾಹಾರವನ್ನು ನಾನು ಭುಜಿಸುವೆ
3. ಈಗ ನಾನು ಪರಮಲೋಕದ ದ್ರಾಕ್ಷಾರಸವನು ಕುಡಿಯುವೆ
ಈಗ ನಾನು ಪಾಪಕ್ಷಮೆಯಾನಂದವನ್ನನುಭವಿಸುವೆ
4. ಪರಮಲೋಕದ ಔತಣದ ಭಾಗ್ಯವೆನ್ನ ಮುಂದಿದೆ
ಕರುಣಾಭರಿತನ ಐಕ್ಯವೆನಗೆ ಧರಣಿಯೊಳಗೆ ಸಂದಿದೆ
5. ನಿನ್ನ ಹೊರತು ಲೋಕದಲ್ಲಿ ಬೇರೆ ಗತಿಯೆಲ್ಲಿದೆ
ನಿನ್ನ ಕೃಪೆಯ ಬಲಾತಿಶಯವೇ ಸಾಕು ಎನಗೆ ಕರ್ತನೇ
6. ನಿನ್ನ ರಕ್ತವು ಮಾನವರಿಗೆ ಮುಕ್ತಿದಾಯಕದಾನವೇ
ಎನ್ನ ಪಾಪದ ದೋಷವನ್ನು ಶುದ್ದಿಮಾಳ್ಪುದು ಯೇಸುವೇ
7. ಇಂದು ಭುಂಜಿಪ ಪ್ರೇಮಭೋಜನ ಮುಂದೆ ಮದಲಿಂಗನೀಯುವೈ
ನಂದದ ಪರದೌತಣಕ್ಕೆ ಇದು ಸರ್ವದಾ ಸಂಚಕಾರವು
Paramakartana Marnavannu Smarisuteega Bhaktare
Karunaabharita guruvanneega Darushisona Bhaktare
1. Enna Bhaaravanellaa Ninna Mele Horisuve Kartane
Unnatonnata Vishayagalanu Mutti Grahisuve Kartane
2. Nityavaada Aasheervaada gatyavaagi Padeyuve
Satyavaada Daivaahaaravannu Naanu Bhujisuve
3. Eega Naanu Paramalokada Draakshaarasavanu Kudiyuve
Eega Naanu Paapakshame yaanandavannanu bhavisuve
4. Paramalokada Autanada Bhaagyavenna Mundide
Karunaabharitana Aikyavenage Dharaniyolage Sandide
5. Ninna Horatu Lokadalli Bere Gatiyellide
Ninna Krupeya Balaatishayave Saaku Enage Kartane
6. Ninna Raktavu Maanavarige Muktidaayaka daanave
Enna Paapada Doshavannu Shuddimaalpudu Yesuve
7. Indu Bhunjipa Premabhojana Munde Madalinganeeyuvai
Nandada Paradautanakke Idu Sarvadaa Sanchakaaravu