ಸ್ತೋತ್ರ 182 Sundara Yesuve Vandyane Baa ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಸುಂದರ ಯೇಸುವೇ ವಂದ್ಯನೇ ಬಾ
ಚಂದಿರಸೊಬಗಿನಾನಂದದ ಮುಖದಿಂದ
1. ಸಂದಕಾಲದೊಳ್ ತಂದೆತಾಯಿಗಳ್
ಕಂದರನ್ನದೋ ಚಂದದಿ ತರುತಾ
ನಂದದಿ ಮುಟ್ಟು ನೀ ನೆನ್ನುತ ಬೇಡಲು ಹರಿಸಿದೆಯೆಲ್ಲವೋ
2. ಯಾವ ಮನುಜನು ಈ ವರಶಿಶುಗಳ
ಭಾವದಿ ಬಯಸನೆ ದೇವರರಾಜ್ಯವ
ಆ ವಿಕಲನು ತಾನದರೊಳು ಸೇರನು ಎಂದೆಯಲ್ಲವೋ ನೀ
3. ಇಂದು ತಂದಿಹ ಕಂದನ ಕರುಣಿಸಿ
ಚಂದದಿ ನೀಡು ಶುದ್ದಾತ್ಮನ ವರವ
ಎಂದಿಗೀ ಶಿಶು ಸುಂದರರಾಜ್ಯದೆ ಅಂದದಿ ಬೆಳೆಯಲಿ
Sundara Yesuve Vandyane Baa
Chandirasobagi naanandada Mukhadinda
1. Sandakaaladol Tandetaayigal
Kandarannado Chandadi Tarutaa
Nandadi Muttu Nee Nennuta Bedalu Harisideyellavo
2. Yaava Manujanu Ee Varashishugala
Bhaavadi Bayasane Devararaajyava
Aa Vikalanu Taanadarolu Seranu Endeyallavo Nee
3. Indu Tandiha Kandana Karunisi
Chandadi Needu Shuddaatmana Varava
Endigee Shishu Sundararaajyade Andadi Beleyali