ಸ್ತೋತ್ರ 178 Santoshadi Needu – Daaniya Devanu ಸಾಹಿತ್ಯ
ಕೆಎಸ್ಐ ಕೆನಡಾ ಹೆಮ್ಸ್
ಸಂತೋಷದಿ ನೀಡು – ದಾನಿಯ ದೇವನು
ಸಂತೋಷದಿ ನೆರೆ – ಹರಸುವನೈ
ಚಿಂತಿಸದೆ ಅ – ನಂತನ ವರ ನೆನೆ
ಸಂತಸದಿಂದಲೇ ನೀಡುತಿರೈ
1. ಧರ್ಮವ ಮಾಡುವ – ಮರ್ಮವದೇನೆಂದು
ನಿರ್ಮಲ ಮನದಿಂದ – ಧ್ಯಾನಿಪುದು
ಧರ್ಮದ ಮೂಲವು – ಸರ್ವಕೃಪಾಳುವ
ನಿರ್ಮಲಪ್ರೇಮದೊ – ಳಿರುತಿಹುದು
2. ದೀನಜನಾತ್ನರ – ಪಾಲನೆಗಾಗಿಯೇ
ದಾನವ ನೀಡಲು – ಮರೆಯದಿರು
ಮಾನವರೆಲ್ಲರು – ಸೋತರರೆಂದಭಿ
ಮಾನದಿಂದಲೇ ಸರಿ – ಕಾಣುತಿರು
3. ಭಕ್ತಿಯಿಂದೆಲ್ಲರು – ಮುಕ್ತಿಸುವಾರ್ತೆಗೆ
ಶಕ್ತಿಯನುಸರಿಸಿ – ಕೊಡುತಿಹರು
ಭಕ್ತಿಗೆ ಗುರುತಿದು – ಕೈಸ್ತ ಸುಭಕ್ತರಾ
ಸಕ್ತಿಯಿಂದನುದಿನ – ಪ್ರಾರ್ತಿಪುದು
4. ತನುಮನಧನಗಳ – ಘನವಾದ ಸೇವೆಗೆ
ವಿನಯದೊಳರ್ಪಿಸ – ನೆನಪಿಡು ನೀ
ಮನದಲಿ ಸ್ಮರಿಸುತ – ಅನುಪಮಬಲಿಯನು
ವಿನಯದ ಮನದೊಳು – ಪಾಡುತಲಿ
Santoshadi Needu – Daaniya Devanu
Santoshadi Nere – Harasuvanai
Chintisade A – Nantana Vara Nene
Santasadindale Needutirai
1. Dharmava Maaduva – Marmavadenendu
Nirmala manadinda – Dhyaanipudu
Dharmada Moolavu – Sarvakrupaaluva
Nirmala premado – Lirutihudu
2. Deenajanaatnara – Paalanegaagiye
Daanava Needalu – Mareyadiru
Maanavarellaru – Sotararendabhi
Maanadindale Sari – Kaanutiru
3. Bhaktiyindellaru – Muktisuvaartege
Shaktiyanusarisi – Kodutiharu
Bhaktige Gurutidu – Kaista Subhaktaraa
Saktiyindanudina – Praarthipudu
4. Tanumana dhanagala – Ghanavaada Sevege
Vinayadolarpisa – Nenapidu Nee
Manadali Smarisuta – Anupamabaliyanu
Vinayada Manadolu – Paadutali